ಶುಕ್ರವಾರ, ಅಕ್ಟೋಬರ್ 27, 2023

ಬಿಡಾಡಿ ದನಗಳ ಹಾವಳಿ ತಡೆಗೆ ಸಮಿತಿ ರಚನೆ


ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆ


ಕೊಟ್ಟಿಗೆಹಾರ:ಕೊಟ್ಟಿಗೆಹಾರ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ತಡೆಗೆ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿ ರಚನೆ ಮಾಡಲಾಗುವುದು ಎಂದು ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಹೇಳಿದರು.
ತರುವೆ ಗ್ರಾ.ಪಂ ಆವರಣದಲ್ಲಿ ನಡೆದ ಬಿಡಾಡಿ ದನಗಳ ಸಮಸ್ಯೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನುವಾರುಗಳ ಕ್ಷೇಮಾಭಿವೃದ್ದಿ ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರಲಿದ್ದು  ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇರಲಿದ್ದಾರೆ. ಸಮಿತಿಯೂ ಬಿಡಾಡಿ ದನಗಳ ಹಾವಳಿ ತಡೆ ಸೇರಿದಂತೇ ಜಾನುವಾರುಗಳ ಕ್ಷೇಮಾಭಿವೃದ್ದಿಗೆ ಕಾರ್ಯ ನಿರ್ವಹಿಸಲಿದೆ.  
 ಕೊಟ್ಟಿಗೆಹಾರ ಭಾಗದಲ್ಲಿ ಶೇ ೯೫ ರಷ್ಟು ವಾರಸುದಾರರು ಇರುವ ಬಿಡಾಡಿ ದನಗಳೇ ಹೆಚ್ಚಾಗಿದೆ. ಮೊದಲ ಹಂತವಾಗಿ ಬಿಡಾಡಿ ದನಗಳ ವಾರಸುದಾರರ ಮಾಹಿತಿಯನ್ನು ಪಶುಪಾಲನಾ, ಪಶುವೈದ್ಯ  ಸೇವಾ ಇಲಾಖೆಯಿಂದ ಕಲೆ ಹಾಕಲಾಗುವುದು.
 ಆ ನಂತರದಲ್ಲಿ ತರುವೆ ಗ್ರಾ.ಪಂ ವತಿಯಿಂದ ಧ್ವನಿ ವರ್ದಕದ ಮೂಲಕ ಬಿಡಾಡಿ ದನಗಳ ವಾರಸುದಾರರಿಗೆ ತಮ್ಮ ಜಾನುವಾರುಗಳನ್ನು ಎಲ್ಲೆಂದರಲ್ಲಿ ಬಿಡದಂತೇ ಸೂಚಿಸಲಾಗುವುದು. 
ಆ ನಂತರವೂ ಕೂಡ ಜಾನುವಾರುಗಳನ್ನು ಬೀದಿಗೆ ಬಿಟ್ಟರೇ ಸಮಿತಿಯ ಮೂಲಕ ದೊಡ್ಡಿಗೆ ಬಿಡಲಾಗುವುದು. ಸೂಕ್ತ ಸ್ಥಳದಲ್ಲಿ ಗೋಮಾಳ ನಿರ್ಮಿಸಿ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ತರುವೆ ಗ್ರಾ.ಪಂಯ ದೊಡ್ಡಿಯು ಶಿಥಿಲಾವಸ್ಥೆ ತಲುಪಿದ್ದು ನಾಳೆಯಿಂದಲ್ಲೇ ದೊಡ್ಡಿಯ ದುರಸ್ತಿ ಕಾರ್ಯ ನಡೆಯಲಿದೆ  ಎಂದರು.
ಬಿಡಾಡಿ ದನಗಳಿಂದ ಅಪಘಾತ ಸಂಭವಿಸುತ್ತಿರುವ ಬಗ್ಗೆ ಮತ್ತು ವಾರಸುದಾರರು ಬಿಡಾಡಿ ದನಗಳನ್ನು ಬಿಡುತ್ತಿರುವುದರಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಅಧಿಕಾರಿಗಳ  ಗಮನ ಸೆಳೆದರು. ಬಿಡಾಡಿ ದನಗಳನ್ನು ಎಲ್ಲೆಂದರಲ್ಲಿ ಬಿಡುವ ಜಾನುವಾರುಗಳ ವಾರಸುದಾರರಿಗೆ ದಂಡ ವಿಧಿಸಬೇಕು. ಮಲೆನಾಡು ಗಿಡ್ಡ ತಳಿಯ ಗೋವುಗಳು ಇಲ್ಲೆ ಹೆಚ್ಚಿದ್ದು ಇವುಗಳ ಸಂರಕ್ಷಣೆ ಮಾಡಬೇಕಿದೆ. ವಾಹನ ಡಿಕ್ಕಿಯಾಗಿ ಜಾನುವಾರುಗಳು ಗಾಯಗೊಂಡಾಗ ಪರಿಹಾರಕ್ಕಾಗಿ ಬರುವ ಜಾನುವಾರಿನ ವಾರಸುದಾರರು ವಾಹನ ಡಿಕ್ಕಿಯಾಗಿ ಜಾನುವಾರುಗಳು ಮೃತ ಪಟ್ಟಾಗ ಬರುವುದಿಲ್ಲ. ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ಮಲಗುವ ಜಾನುವಾರುಗಳಿಂದ ಅಪಘಾತ ಸಂಭವಿಸುವುದು ಹೆಚ್ಚಾಗಿದ್ದು ಜಾನುವಾರುಗಳಿಗೆ ಪ್ರತಿಫಲಕಗಳನ್ನು ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯ ನಂತರ ಶಿಥಿಲಾವಸ್ಥೆ ತಲುಪಿದ ಜಾನುವಾರು ದೊಡ್ಡಿಯ ಸ್ಥಳಕ್ಕೆ  ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಸ್ವರೂಪ, ರಘು, ಸುಶೀಲಾ, ಪಿಡಿಓ ಮಹೇಶ್, ಲೆಕ್ಕ ಸಹಾಯಕರಾದ ಉಮಾ, ಸಿಬ್ಬಂದಿಗಳಾದ ಪ್ರವೀಣ್, ಕಾವ್ಯ, ಮಾಧವ, ವಿಠಲ, ಸಂದೀಪ್,  ಪಶು ವೈದ್ಯಾಧಿಕಾರಿ ಡಾ.ಮನು, ನಿವೃತ್ತ ಜಾನುವಾರು ಅಭಿವೃದ್ದಿ ಅಧಿಕಾರಿ ಲಿಯೋ ಸುದೇಶ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಗ್ರಾಮಸ್ಥರಾದ ಸಂಜಯಗೌಡ ಕೊಟ್ಟಿಗೆಹಾರ, ಗಜೇಂದ್ರ, ಪ್ರಭಾಕರ್ ಬಿನ್ನಡಿ, ಆರೀಪ್ ಬಣಕಲ್, ಸಾಗರ್ ತರುವೆ, ತನು ಕೊಟ್ಟಿಗೆಹಾರ, ಆದರ್ಶ ತರುವೆ, ದೀಕ್ಷಿತ್, ಹಸೈನಾರ್, ವಿಜೇಂದ್ರ, ಪ್ರಶಾಂತ್, ರಾಜು, ವಿಕ್ರಂ, ಗೋಪಾಲ್, ಸಂದೀಪ್ ಮುಂತಾದವರು ಇದ್ದರು.

ಭಾನುವಾರ, ಸೆಪ್ಟೆಂಬರ್ 17, 2023

ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ

ಕೊಟ್ಟಿಗೆಹಾರ:ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ sಸ್ಥಾಪಕ ಅಧ್ಯಕ್ಷರಾದ ಅಶ್ವಿನ್ ಬಿ.ಕೆ ಹೇಳಿದರು.
ಬಣಕಲ್‌ನಲ್ಲಿ ನಡೆದ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಹಕಾರ ಸಂಸ್ಥೆಗಳು ಬಡವರು, ಕಾರ್ಮಿಕರು, ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಲೂ ಪ್ರಮುಖ ಪಾತ್ರ ವಹಿಸಿವೆ. ಈ ಭಾಗದ ಜನರ ಆರ್ಥಿಕ ಏಳಿಗೆಗೆ ಸಹಕಾರ ಸಂಘಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘವು ಪ್ರಗತಿಯತ್ತ ಸಾಗುತ್ತಿದ್ದು ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷರಾದ ಎಂ.ಎಸ್.ಕಾರ್ತೀಕ್, ನಿರ್ದೇಶಕರಾದ ಡಿ.ಕೆ ಸತೀಶ್, ಆದರ್ಶ್, ರಘು, ಶಶಾಂಕ್, ಗಾನವಿ, ಕವಿತ, ಪ್ರಿಯಾಂಕ, ಮಹೇಂದ್ರ, ಮುಖ್ಯ ಕಾರ್ಯ ನಿರ್ವಾಹಕರಾದ ಶ್ವೇತಾ, ಸದಸ್ಯರಾದ ಎನ್.ಟಿ ದಿನೇಶ್, ಸಿಬ್ಬಂದಿಗಳಾದ ರಶ್ಮಿ, ನಿಶ್ಮಿತಾ ಇದ್ದರು.

ಶುಕ್ರವಾರ, ಜುಲೈ 28, 2023

ಭಾನುವಾರ (ಜುಲೈ 30) ಕೊಟ್ಟಿಗೆಹಾರ (ಅತ್ತಿಗೆರೆ)ಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ

   ಕೊಟ್ಟಿಗೆಹಾರ: ಚಿಕ್ಕಮಗಳೂರಿನ ಸ್ವಾಭಿಮಾನಿ ಪತ್ರಕರ್ತರ ಜನಪರ ವೇದಿಕೆ 'ಪಬ್ಲಿಕ್ ಇಂಪಾಕ್ಟ್ ' ಖಾಸಗಿ ವಾಹಿನಿ  ವತಿಯಿಂದ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಎಸ್.ಅಶ್ವತ್ಥ್ ಅವರ ಗದ್ದೆಯಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಪುರುಷರ ಹಗ್ಗಜಗ್ಗಾಟ ಪ್ರಥಮ 10ಸಾವಿರ,ದ್ವಿತೀಯ 5ಸಾವಿರ, ತೃತೀಯ 3ಸಾವಿರ ಹಾಗೂ  ಮಹಿಳೆಯರ ಹಗ್ಗಜಗ್ಗಾಟ ಪ್ರಥಮ ಕ್ರಮವಾಗಿ 10ಸಾವಿರ,5ಸಾವಿರ, 3ಸಾವಿರ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ  ಕ್ರಮವಾಗಿ 5ಸಾವಿರ,3ಸಾವಿರ,2ಸಾವಿರ ಮತ್ತು  ಮಹಿಳೆಯರ ಥ್ರೋಬಾಲ್ 5ಸಾವಿರ,3ಸಾವಿರ ಹಾಗೂ 2 ಸಾವಿರ.ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ 1ಸಾವಿರ, 500ಹಾಗೂ ತೃತೀಯ 300ರೂ ಬಹುಮಾನ ನೀಡಲಾಗುವುದು.ಆಸಕ್ತರು ಮೊಬೈಲ್ ಸಂಖ್ಯೆ  9148055429/9916917520 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರಾದ ಪ್ರಶಾಂತ್ ಮೂಡಿಗೆರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸೋಮವಾರ, ಜುಲೈ 10, 2023

ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ.ರಮೇಶ್ ಸಿ ನೇಮಕ

ಕೊಟ್ಟಿಗೆಹಾರ:ಮೂಡಿಗೆರೆ ಪಶು ಆಸ್ಪತ್ರೆಯ ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಮೇಶ್ ಸಿ ನೇಮಕಗೊಂಡಿದ್ದಾರೆ. 
ಈ ಹಿಂದೆ ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರು ಪಶು ಚಿಕಿತ್ಸಾಲಯದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾಗಿದ್ದ ಡಾ. ರಮೇಶ್ ಸಿ ಅವರನ್ನು ಮೂಡಿಗೆರೆ ಪಶು ಆಸ್ಪತ್ರೆಗೆ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೆಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಮೂಡಿಗೆರೆ ಪಶು ಆಸ್ಪತ್ರೆಯಲ್ಲಿ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಮನು ಅವರಿಂದ  ಡಾ. ರಮೇಶ್ ಸಿ ಅವರು ಅಧಿಕಾರ ಸ್ವೀಕರಿಸಿದರು. 

ಸೋಮವಾರ, ಮೇ 1, 2023

ತಾಯಿಯ ಅನುಭವ, ನನ್ನ ಕ್ರಿಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿಕೆ


ಈ ಹಿಂದೆ ಸಚಿವೆಯಾಗಿ, ಕ್ಷೇತ್ರದ ಶಾಸಕಿಯಾಗಿ  ಜನರ ಸೇವೆ ಮಾಡಿದ್ದ ತಾಯಿ ಮೋಟಮ್ಮ ಅವರ ರಾಜಕೀಯ ಅನುಭವ ಮತ್ತು ನನ್ನ ಕ್ರೀಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಕಂಕಣಬದ್ದವಾಗಿದ್ದು ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿದರು.
ಸೋಮವಾರ, ಬಣಕಲ್, ಕೊಟ್ಟಿಗೆಹಾರ, ಸಬ್ಬೇನಹಳ್ಳಿ, ಬಂಕೇನಹಳ್ಳಿ, ಚಕ್ಕಮಕ್ಕಿ ಮುಂತಾದ ಕಡೆಗಳಲ್ಲಿ ಮತಯಾಚನೆ ವೇಳೆ ಕೊಟ್ಟಿಗೆಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೋಡಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಹಲವು ರೈತರ ಸಮಸ್ಯೆಗಳಿದ್ಧು ಅದನ್ನು ಕಾರ್ಯರೂಪಕ್ಕೆ ತರುತ್ತೇನೆ. ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಮಾತನಾಡಿ, ಮಾಜಿ ಸಚಿವೆ ಮೋಟಮ್ಮನವರ ಜನಪರ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ತರುವೆ ಗ್ರಾ.ಪಂಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಂದರೇಶ್‌ಗೌಡ, ಸಬ್ಲಿ ದೇವರಾಜ್,  ಟಿ.ಎ.ಖಾದರ್, ಇರ್ಪಾನ್, ರಾಮಚಂದ್ರೆಗೌಡ, ಸುಬ್ರಹ್ಮಣ್ಯ, ದಿಲ್‌ದಾರ್ ಬೇಗಂ, ಅಜೀಜ್, ಮನು, ಇರ್ಪಾನ್, ಮಹೇಶ್, ಕುಮಾರ್ ಮುಂತಾದವರು ಇದ್ದರು.

ಶೋಷಿತ, ಬಡವರ್ಗದ ಧ್ವನಿಯಾಗಿ ಸಿಪಿಐ ಕಾರ್ಯ ನಿರ್ವಹಣೆ: ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿಕೆ


ಕೊಟ್ಟಿಗೆಹಾರ:ಹಿಂದಿನಿಂದಲೂ ಶೋಷಿತ ಬಡವರ್ಗದ ಧ್ವನಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸಿಪಿಐ ಪಕ್ಷವನ್ನು ಮತದಾರರು ಬೆಂಬಲಿಸಲ್ಲಿದ್ದಾರೆ ಎಂದು ಮೂಡಿಗೆರೆಯ ಸಿಪಿಐ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿದರು.
ಕೊಟ್ಟಿಗೆಹಾರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸನ ಸಭೆಗೆ ಆಯ್ಕೆಯಾದರೇ ಮೂಡಿಗೆರೆ ಕ್ಷೇತ್ರದ ಎಲ್ಲಾ ಅರ್ಹ ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವುದು ಸರ್ಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಿ ಎಲ್ಲಾ ಬಡವರಿಗೂ ಕೈಗೆಟುಕುವ  ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದು ಮೊದಲ ಆದ್ಯೆತೆಯಾಗಿದೆ ಎಂದರು.
ಹಲವಾರು ದಶಕಗಳಿಂದ  ಸಿಪಿಐ ಪಕ್ಷ ನೊಂದವರ ಪರವಾಗಿ ಹೋರಾಟ ರೂಪಿಸುತ್ತ ಬಂದಿದೆ. ಮೂಡಿಗೆರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ, ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ, ಕಾಫಿ ಉದ್ಯಮದ ಉನ್ನತಿಗೆ, ತೋಟ ಕಾರ್ಮಿಕರ ಶ್ರೇಯೋಭಿವೃದ್ದಿಗೆ, ಅಸಂಘಟಿತ ಕಾರ್ಮಿಕರ ಹಿತ ಕಾಯಲು, ದಲಿತ, ಹಿಂದುಳಿದ,ಅಲ್ಪಸಂಖ್ಯಾತ, ಮಹಿಳೆಯರ ಬದುಕನ್ನು ಹಸನು ಮಾಡಲು ಸಿಪಿಐ ಕಂಕಣಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರಾದ ರಾಜು ಬಾನಳ್ಳಿ, ಅವಿನ್ ಕೊಟ್ಟಿಗೆಹಾರ, ಶಂಕರ್, ವಸಮತ್, ಸುಂದರ್ ಬಾಳೂರು, ರಿ, ರಾಜು, ಲಕ್ಷ್ಮಿ, ಗುಲಾಬಿ, ಯಮುನಾ ಮುಂತಾದವರು ಇದ್ದರು.

ಭಾನುವಾರ, ಏಪ್ರಿಲ್ 30, 2023

ಗ್ರಾಮದ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ:ನಯನ ಮೋಟಮ್ಮ

ಕೊಟ್ಟಿಗೆಹಾರ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷಕ್ಕೆ ಬಹು ದೊಡ್ಡ ಇತಿಹಾಸವಿದೆ.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್.ದೇಶ ಕಟ್ಟಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಬಾಳೂರು ಹೋಬಳಿಯ ಬಾಳೂರು,ಜಾವಳಿ,ಕೂವೆ,ಕಲ್ಮನೆ,ಮಾಳಿಂಗನಾಡು,ಗಬ್ಗಲ್, ನಿಡುವಾಳೆ,ಸುಂಕಸಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಪರ ಮತಯಾಚನೆ ಮಾಡಿ ಮಾತನಾಡಿದರು.
ಮತದಾರರಿಗೆ ಸರಿಯಾಗಿ ವಿಮರ್ಶೆ ಮಾಡಿ ಮತದಾನ ಮಾಡಲು ಕಾಲಾವಕಾಶವಿದೆ.ರಸ್ತೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಮೋದಿಯವರಲ್ಲ.ನಂತರ ಅವರ ಕಾಲದಲ್ಲಿ ಡಾಂಬರೀಕರಣ ಆಗಿರಬಹುದು.ಹಿರಿಯ ನಾಯಕಿ ಮೋಟಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಸಾಕಷ್ಟು ಗರಿಷ್ಟ ಕೆಲಸವನ್ನು ಮಾಡಿದ್ದಾರೆ.ಅವರ ಪುತ್ರಿ ನಯನಾ ಕೂಡ ಶಿಕ್ಷಿತರಾಗಿದ್ದು  ಕ್ಷೇತ್ರವನ್ನು ಅಬಿವೃದ್ಧಿ ಪಥದಲ್ಲಿ ಸಾಗಿಸುತ್ತಾರೆ ಎಂಬ ಆತ್ಮ ವಿಶ್ವಾಸವಿದೆ.ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ನಯನಾ ಅವರಿಗೆ ಜನ ಸೇವೆ ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿದರು.
ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿ ' ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೂಢಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ.ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ.ಪ್ರತಿಯೊಂದು ಗ್ರಾಮದ  ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.
ಈ ಸಂದರ್ಭದಲ್ಲಿ ಬಾಳೂರು ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ  ಶ್ರೀನಾಥ್,ಜಿಲ್ಲಾ ವಕ್ತಾರ ಪ್ರಸನ್ನ ಮರಗುಂದ,ಮುಖಂಡರಾದ ಜಿ.ಎಚ್.ಹಾಲಪ್ಪ ಗೌಡ,ಸಬ್ಲಿ ದೇವರಾಜ್,ರವಿ ವಾಟೇಖಾನ್,ಕೆ.ಸಿ.ಮಹೇಂದ್ರ,ಉಪೇಂದ್ರ,ಲಾರೆನ್ಸ್ ಡಿಸೋಜ, ಮಹೇಶ್ ಬಾಳೂರು,ರಿಯಾಜ್, ಜಮೀರ್,ಚಂದ್ರಶೇಖರ್,ಎನ್.ಎಂ.ರವಿ,ಚಂದ್ರು ಕೂವೆ,ಲಕ್ಷ್ಮಣ್,ಮೋಹನ್ ಪಟೇಲ್,ನವೀನ್,ಸಂಜೀವ,ಸ್ವಾಮಿ ಮರ್ಕಲ್  ಮತ್ತಿತರರು ಇದ್ದರು