ಪುರುಷರ ಹಗ್ಗಜಗ್ಗಾಟ ಪ್ರಥಮ 10ಸಾವಿರ,ದ್ವಿತೀಯ 5ಸಾವಿರ, ತೃತೀಯ 3ಸಾವಿರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪ್ರಥಮ ಕ್ರಮವಾಗಿ 10ಸಾವಿರ,5ಸಾವಿರ, 3ಸಾವಿರ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ಕ್ರಮವಾಗಿ 5ಸಾವಿರ,3ಸಾವಿರ,2ಸಾವಿರ ಮತ್ತು ಮಹಿಳೆಯರ ಥ್ರೋಬಾಲ್ 5ಸಾವಿರ,3ಸಾವಿರ ಹಾಗೂ 2 ಸಾವಿರ.ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ 1ಸಾವಿರ, 500ಹಾಗೂ ತೃತೀಯ 300ರೂ ಬಹುಮಾನ ನೀಡಲಾಗುವುದು.ಆಸಕ್ತರು ಮೊಬೈಲ್ ಸಂಖ್ಯೆ 9148055429/9916917520 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರಾದ ಪ್ರಶಾಂತ್ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಶುಕ್ರವಾರ, ಜುಲೈ 28, 2023
ಭಾನುವಾರ (ಜುಲೈ 30) ಕೊಟ್ಟಿಗೆಹಾರ (ಅತ್ತಿಗೆರೆ)ಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ
ಕೊಟ್ಟಿಗೆಹಾರ: ಚಿಕ್ಕಮಗಳೂರಿನ ಸ್ವಾಭಿಮಾನಿ ಪತ್ರಕರ್ತರ ಜನಪರ ವೇದಿಕೆ 'ಪಬ್ಲಿಕ್ ಇಂಪಾಕ್ಟ್ ' ಖಾಸಗಿ ವಾಹಿನಿ ವತಿಯಿಂದ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಎಸ್.ಅಶ್ವತ್ಥ್ ಅವರ ಗದ್ದೆಯಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಸೋಮವಾರ, ಜುಲೈ 10, 2023
ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ.ರಮೇಶ್ ಸಿ ನೇಮಕ
ಕೊಟ್ಟಿಗೆಹಾರ:ಮೂಡಿಗೆರೆ ಪಶು ಆಸ್ಪತ್ರೆಯ ನೂತನ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಡಾ. ರಮೇಶ್ ಸಿ ನೇಮಕಗೊಂಡಿದ್ದಾರೆ.
ಈ ಹಿಂದೆ ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರು ಪಶು ಚಿಕಿತ್ಸಾಲಯದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾಗಿದ್ದ ಡಾ. ರಮೇಶ್ ಸಿ ಅವರನ್ನು ಮೂಡಿಗೆರೆ ಪಶು ಆಸ್ಪತ್ರೆಗೆ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೆಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಮೂಡಿಗೆರೆ ಪಶು ಆಸ್ಪತ್ರೆಯಲ್ಲಿ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಮನು ಅವರಿಂದ ಡಾ. ರಮೇಶ್ ಸಿ ಅವರು ಅಧಿಕಾರ ಸ್ವೀಕರಿಸಿದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)