ಕೊಟ್ಟಿಗೆಹಾರ:ಹಿಂದಿನಿಂದಲೂ ಶೋಷಿತ ಬಡವರ್ಗದ ಧ್ವನಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸಿಪಿಐ ಪಕ್ಷವನ್ನು ಮತದಾರರು ಬೆಂಬಲಿಸಲ್ಲಿದ್ದಾರೆ ಎಂದು ಮೂಡಿಗೆರೆಯ ಸಿಪಿಐ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಹೇಳಿದರು.
ಕೊಟ್ಟಿಗೆಹಾರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸನ ಸಭೆಗೆ ಆಯ್ಕೆಯಾದರೇ ಮೂಡಿಗೆರೆ ಕ್ಷೇತ್ರದ ಎಲ್ಲಾ ಅರ್ಹ ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವುದು ಸರ್ಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಿ ಎಲ್ಲಾ ಬಡವರಿಗೂ ಕೈಗೆಟುಕುವ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದು ಮೊದಲ ಆದ್ಯೆತೆಯಾಗಿದೆ ಎಂದರು.
ಹಲವಾರು ದಶಕಗಳಿಂದ ಸಿಪಿಐ ಪಕ್ಷ ನೊಂದವರ ಪರವಾಗಿ ಹೋರಾಟ ರೂಪಿಸುತ್ತ ಬಂದಿದೆ. ಮೂಡಿಗೆರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ, ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ, ಕಾಫಿ ಉದ್ಯಮದ ಉನ್ನತಿಗೆ, ತೋಟ ಕಾರ್ಮಿಕರ ಶ್ರೇಯೋಭಿವೃದ್ದಿಗೆ, ಅಸಂಘಟಿತ ಕಾರ್ಮಿಕರ ಹಿತ ಕಾಯಲು, ದಲಿತ, ಹಿಂದುಳಿದ,ಅಲ್ಪಸಂಖ್ಯಾತ, ಮಹಿಳೆಯರ ಬದುಕನ್ನು ಹಸನು ಮಾಡಲು ಸಿಪಿಐ ಕಂಕಣಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರಾದ ರಾಜು ಬಾನಳ್ಳಿ, ಅವಿನ್ ಕೊಟ್ಟಿಗೆಹಾರ, ಶಂಕರ್, ವಸಮತ್, ಸುಂದರ್ ಬಾಳೂರು, ರಿ, ರಾಜು, ಲಕ್ಷ್ಮಿ, ಗುಲಾಬಿ, ಯಮುನಾ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ