ಸೋಮವಾರ, ಜನವರಿ 6, 2025

ವಸ್ತು ಪ್ರದರ್ಶನದಲ್ಲಿ ಜ್ಞಾನ ವಿಜ್ಞಾನ ಕಲೆಯ ಅನಾವರಣ

ಚಿಕ್ಕಮಗಳೂರು:ಎಂಎಲ್‌ಎಂಎನ್ ಬಿಎಡ್ ಕಾಲೇಜು ಆವರಣದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಜ್ಞಾನ ವಿಜ್ಞಾನ ಕಲೆಯ ಅನಾವರಣವಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ ಎಚ್.ಎಸ್ ಹೇಳಿದರು.

ನಗರದ ಎಂಎಲ್‌ಎಂಎನ್ ಬಿಎಡ್ ಕಾಲೇಜಿನಲ್ಲಿ ಮಲೆನಾಡು ವಿದ್ಯಾಸಂಸ್ಥೆ, ಎಂಎಲ್‌ಎಂಎನ್ ಬಿಎಡ್ ಕಾಲೇಜು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧ ಅರ್ಥ್ ಟ್ರಸ್ಟ್, ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಜ್ಞಾನ ವಿಜ್ಞಾನ ಕಲಾ ವೈಭವ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪುರಾತನ ವಸ್ತುಗಳು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸ್ತುಗಳನ್ನು ನೋಡಿ ಸುಮ್ಮನಾಗದೇ ವಿದ್ಯಾರ್ಥಿಗಳು ಟಿಪ್ಪಣ  ಮಾಡಿಕೊಂಡು ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಜ್ಞಾನಾಸಕ್ತರನ್ನು ಕೈ ಬೀಸಿ ಕರೆಯುವ ಈ ವಸ್ತು ಪ್ರದರ್ಶನ ಹಲವು ಕ್ಷೇತ್ರಗಳ ಮಾಹಿತಿ ಅನಾವರಣಕ್ಕೆ ವೇದಿಕೆಯಾಗಿದೆ. ಕೀಟ ಪ್ರಪಂಚ, ಪುರಾತನ ವಸ್ತುಗಳು, ನೂರಾರು ಅಂಚೆ ಚೀಟಿಗಳು, ಲಕೋಟೆಗಳು, ನಾಣ್ಯಗಳು, ನೋಟುಗಳು ಈ ವಸ್ತು ಪ್ರದರ್ಶನದ ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎಲ್.ವಿಜಯಕುಮಾರ್, ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರು ಅಪರೂಪದ ಪುರಾತನ ವಸ್ತುಗಳು, ನಾಣ್ಯಗಳು, ಅಂಚೆ ಚೀಟಿಳು ಸೇರಿದಂತೇ ಅಪೂರ್ವವಾದ ವಸ್ತು ಸಂಗ್ರಹವನ್ನು ಹೊಂದಿದ್ದಾರೆ. ಜ್ಞಾನದ ಅನಾವರಣಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಕೀಟ ಪ್ರದರ್ಶನ, ನಾಣ್ಯ ಮತ್ತು ನೋಟು, ಪುರಾತನ ವಸ್ತುಗಳು ಮತ್ತು ಅಂಚೆ ಚೀಟಿಗಳ ಕೊಠಡಿಗಳ ಉದ್ಘಾಟನೆಯನ್ನು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಕೇಶವಮೂರ್ತಿ, ಉಪಾಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೆಗೌಡ, ರಾಧಾಸುಂದರೇಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಎಂಎಲ್‌ಎಂಎನ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗಣೇಶ್, ೧ ಅರ್ಥ್ ಟ್ರಸ್ಟ್ ನ  ಅಧ್ಯಕ್ಷರಾದ ಫಣೀಂದ್ರ, ಮ್ಯಾನೇಜಿಂಗ್ ಟ್ರಸ್ಟಿ ಭರತ್ ಸಿ.ವಿ, ಸದಸ್ಯೆ ಚೈತ್ರ, ವಸ್ತು ಸಂಗ್ರಹಕಾರರಾದ ಎಂ.ಎಲ್.ಅಶೋಕ್, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಶಿವಾನಂದಸ್ವಾಮಿ, ಎಂಇಎಸ್ ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಎನ್.ಶಂಕರನಾರಾಯಣ ಭಟ್, ಶೈಕ್ಷಣ ಕ ಸಲಹೆಗಾರರಾದ ಮಂಜುನಾಥ್ ಭಟ್,  ಶಿಕ್ಷಣ ಸಂಯೋಜಕರಾದ ಟಿಜಿಕೆ ಅರಸ್, ವ್ಯವಸ್ಥಾಪಕಿ ಲಕ್ಷಿö್ಮ, ಸಹಾಯಕ ಪ್ರಾಧ್ಯಾಪಕರಾದ ಡಾ.ರುದ್ರಪ್ಪ ಎನ್ ತಳವಾರ, ಪ್ರಶಿಕ್ಷಣಾರ್ಥಿ ಪ್ರಿಯಾಂಕ, ರುಕ್ಸಾನ ಎಂ, ಕಾಚೂರ್, ಕೀಟ ತಜ್ಞರಾದ ಡಾ.ಅವಿನಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಸಹಾಯಕ ನವದೀಪ್, ಸಿಬ್ಬಂದಿ ಪೂರ್ಣೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ಮುಂತಾದವರು ಇದ್ದರು.

ಜನವರಿ ೮ರವರೆಗೆ ನಡೆಯುವ ವಸ್ತು ಪ್ರದರ್ಶನ


ಜನವರಿ ೬ ರಿಂದ ಆರಂಭವಾಗಿರುವ ವಸ್ತು ಪ್ರದರ್ಶನ ಜನವರಿ ೮ ರವರೆಗೆ ನಡೆಯಲಿದೆ. ನೂರಾರು ಕೀಟಗಳು, ಅಪರೂಪದ ವಸ್ತುಗಳು, ಅಂಚೆಚೀಟಿಗಳು, ಪುರಾತನ ನಾಣ್ಯಗಳು ವಸ್ತು ಪ್ರದರ್ಶನದಲ್ಲಿ ಇರಲಿವೆ. ಬೆಳಿಗ್ಗೆ ೯.೩೦ ರಿಂದ ಸಂಜೆ ೭ ಗಂಟೆಯವರೆಗೆ ವಸ್ತು ಪ್ರದರ್ಶನ ಇರಲಿದ್ದು ಹೆಚ್ಚಿನ ಮಾಹಿತಿಗೆ ೯೪೪೮೫೩೦೫೧೯, ೯೬೬೩೪೦೪೨೯೨, ೯೯೮೬೧೪೦೫೯೭ ಗೆ ಸಂಪರ್ಕಿಸಬಹುದಾಗಿದೆ.

ಭಾನುವಾರ, ಜನವರಿ 5, 2025

ನಾಳೆಯಿಂದ ಚಿಕ್ಕಮಗಳೂರಿನಲ್ಲಿ ವಸ್ತು ಪ್ರದರ್ಶನ


ಚಿಕ್ಕಮಗಳೂರು:ನಗರದ  ಎಂ.ಎಲ್. ಮಂಜಯ್ಯ ಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಜ್ಞಾನ ವಿಜ್ಞಾನ ಕಲಾ ವೈಭವ ವಸ್ತು ಪ್ರದರ್ಶನ ಇಂದಿನಿಂದ ಜನವರಿ ೮ ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಸಿದ್ದತೆಗಳು ಭರದಿಂದ ಸಾಗಿದೆ.
ಮಲೆನಾಡು ವಿದ್ಯಾಸಂಸ್ಥೆ, ಎಂ.ಎಲ್.ಎಮ್.ಎನ್ ಬಿಎಡ್ ಕಾಲೇಜು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧ ಅರ್ಥ್, ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಸ್ತು ಪ್ರದರ್ಶನ ನಡೆಯುತ್ತಿದ್ದು ಭಾರತದ ಇತಿಹಾಸ, ಸಂಸ್ಕೃತಿ, ಕಲೆ ಮಹಾನ್ ವ್ಯಕ್ತಿಗಳ ವಿಜ್ಞಾನ, ವಾಸ್ತುಶಿಲ್ಪ, ಸ್ವಾತಂತ್ರ‍್ಯ ಹೋರಾಟಗಾರರ, ಪುರಾತನ ವಸ್ತುಗಳು ಸೇರಿದಂತೆ ಕೀಟಗಳು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ನೂರಕ್ಕೂ ಹೆಚ್ಚು ಕೀಟಗಳು ಪ್ರದರ್ಶನದಲ್ಲಿ ಇರಲಿದ್ದು ೧೫ ರಿಂದ ೨೦ ಸಾವಿರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಲಿದ್ದಾರೆ.

ವಸ್ತು ಪ್ರದರ್ಶನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಜ್ಞಾನಾಸಕ್ತರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಕಾಲೇಜು ಆವರಣದಲ್ಲಿ ವಸ್ತುಗಳನ್ನು ಜೋಡಿಸಿ ವಸ್ತು ಪ್ರದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದ್ದು ಎಂ.ಎಲ್.ಎಂ.ಎನ್ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್, ಎಂ.ಎಲ್. ಮಂಜಯ್ಯ ಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಚೈತನ್ಯ ಭಾರತಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗಣೇಶ್, ೧ಅರ್ಥ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ  ಭರತ್ ಸಿ.ವಿ, ವಸ್ತು ಸಂಗ್ರಹಕಾರರಾದ  ಅಶೋಕ್, ಕೀಟ ತಜ್ಞ ಡಾ.ಅವಿನಾಶ್ ಮುಂತಾದವರು ಇದ್ದರು.

ಭಾನುವಾರ, ಡಿಸೆಂಬರ್ 29, 2024

ತೇಜಸ್ವಿ ಪ್ರತಿಷ್ಠಾನಕ್ಕೆ ಗೀತ ರಚನಾಕಾರ,ಸಂಗೀತ ನಿರ್ದೇಶಕ, ಹಂಸಲೇಖ ಭೇಟಿ

ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಖ್ಯಾತ ಗೀತ ರಚನಾಕಾರ, ಸಂಗೀತ ನಿರ್ದೇಶಕ ಹಂಸಲೇಖ ಭಾನುವಾರ ಭೇಟಿ ನೀಡಿದರು.

ಪ್ರತಿಷ್ಠಾನದ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ,  ಕ್ಯಾಲಿಗ್ರಫಿ ಕಲಾಕೃತಿಗಳನ್ನು ವೀಕ್ಷಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುವೆಂಪು ಅವರ ಜನ್ಮದಿನದಂದು  ಅವರ ಪುತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದೇನೆ. ವಸ್ತು ಸಂಗ್ರಹಾಲಯದ ಉತ್ಪನ್ನ ಭಂಡಾರ ಗತಕಾಲದ ಅಪೂರ್ವ ಸಂಗ್ರಹವಾಗಿದೆ. ಕೀಟ ಸಂಗ್ರಹಾಲಯ, ವಸ್ತು ಸಂಗ್ರಹಾಲಯವನ್ನು  ನಿಂತು ಕೂತು ನಡೆದು ವೀಕ್ಷಿಸಿ ಕರ್ನಾಟಕದ ಕಿರೀಟ ಹೊತ್ತಂತೆ ಸಂಭ್ರಮಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕವಿ ಗೋರವಿ ಆಲ್ದೂರು, ಎಂ
ಎಲ್ ಅಶೋಕ್ ಮುಂತಾದವರು ಇದ್ದರು.

ಮಂಗಳವಾರ, ಡಿಸೆಂಬರ್ 3, 2024

ಡಿಸೆಂಬರ್ ೭ ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ



 ಬಣಕಲ್:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ ೭ ರಂದು ಪುಸ್ತಕ ಪರಿಶೆ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ ೭ ರ ಶನಿವಾರ ಬೆಳಿಗ್ಗೆ ೯-೩೦ ಕ್ಕೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂವಾದಗಳು ನಡೆಯಲಿದೆ. ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಶದ ನಡೆಯಲಿದ್ದು ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ.
 ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡನೆ ಮಾಡಲಿದ್ದು ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣ ಸೇರಿದಂತೇ ಬರಹದ ಹೊಸ ಮಾದ್ಯಮ ಸಾಧ್ಯತೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಯ ಕುರಿತು ಸಂವಾದ ನಡೆಯಲಿದ್ದು ಸಾಹಿತ್ಯ ವಲಯಕ್ಕೆ ಉಪಯುಕ್ತ ಕಾರ್ಯಕ್ರಮ ಇದಾಗಲಿದೆ.
ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕರಾದ ಆರ್.ಜಿ.ನಾಗರಾಜ್, ಹರಿವು ಬುಕ್ಸ್ ನ ಪ್ರಕಾಶಕರಾದ ರತೀಶ್ ಬಿ.ಆರ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ. ಬರಹದ ಹೊಸ ಮಾದ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಚಿತ್ರಕತೆ ಬರಹಗಾರರು, ಪತ್ರಕರ್ತರಾದ ವಿಕಾಸ್ ನೇಗಿಲೋಣ , ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಗಟಕರಾದ ಕುನಾಲ್ ಕನ್ನಡಿಗ ಅವರು ಭಾಗವಹಿಸಲಿದ್ದಾರೆ. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕರಾದ ಜಯರಾಮಾಚಾರಿ ಭಾಗವಹಿಸಲಿದ್ದಾರೆ.
ಪುಸ್ತಕ ಪರಿಶೆ ಕಾರ್ಯಕ್ರಮದಲ್ಲಿ ೧೦೦ ಲೇಖಕರಿಗೆ ಮಾತ್ರ ಅವಕಾಶವಿದ್ದು ೫೦೦ ರೂ ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೮೨೭೭೫೮೯೮೫೯, ೯೬೬೩೦೯೮೮೭೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 


ಡಿಸೆಂಬರ್ ೮ ಕ್ಕೆ ದೇವರಮನೆಗೆ ಚಾರಣ
ಅಕ್ಷರ ಪರಿಶೆ ಕಾರ್ಯಕ್ರಮದ ಮರುದಿನ ಡಿಸೆಂಬರ್ ೮ ರಂದು ದೇವರಮನೆಗೆ ಚಾರಣ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಕ್ಷರ ಪರಿಶೆ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದವರು ಮಾತ್ರ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಚಾರಣದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಊಟ, ವಾಹನ ವ್ಯವಸ್ಥೆ, ಕಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಕೆ


 ಬಣಕಲ್:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಖಿಯರ ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ವತಿಯಿಂದ ಶಾಸಕರಾದ ನಯನ ಮೋಟಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.

ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷೆ ಗಾನವಿ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಮುಖ್ಯಪುಸ್ತಕ ಬರಹಗಾರರಿಗೆ ಮಾಸಿಕ ೨೦ ಸಾವಿರ ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಗ್ರಾ.ಪಂ ಮಟ್ಟದ ಒಕ್ಕೂಟದ ಸಖಿಯರಿಗೆ ಮಾಸಿಕ ೧೫ ಸಾವಿರ ವೇತನ ನೀಡಬೇಕು. ಸರ್ಕಾರದಿಂದ ನೇರವಾಗಿ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ವೇತನ ಜಮೆಯಾಗಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ, ಮುಖ್ಯಪುಸ್ತಕ ಬರಹಗಾರರು, ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಕ್ಕೂಟದ ಸಖಿಯರ ಬೇಡಿಕೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಖಿಯರ ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ವೇತಾ ಶೆಟ್ಟಿ, ಖಜಾಂಚಿ ಪ್ರಾಪ್ತಿ ಹಾಗೂ ಮುಖ್ಯ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಸಖಿಯರು ಇದ್ದರು.