ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಖ್ಯಾತ ಗೀತ ರಚನಾಕಾರ, ಸಂಗೀತ ನಿರ್ದೇಶಕ ಹಂಸಲೇಖ ಭಾನುವಾರ ಭೇಟಿ ನೀಡಿದರು.
ಪ್ರತಿಷ್ಠಾನದ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಕ್ಯಾಲಿಗ್ರಫಿ ಕಲಾಕೃತಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುವೆಂಪು ಅವರ ಜನ್ಮದಿನದಂದು ಅವರ ಪುತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದೇನೆ. ವಸ್ತು ಸಂಗ್ರಹಾಲಯದ ಉತ್ಪನ್ನ ಭಂಡಾರ ಗತಕಾಲದ ಅಪೂರ್ವ ಸಂಗ್ರಹವಾಗಿದೆ. ಕೀಟ ಸಂಗ್ರಹಾಲಯ, ವಸ್ತು ಸಂಗ್ರಹಾಲಯವನ್ನು ನಿಂತು ಕೂತು ನಡೆದು ವೀಕ್ಷಿಸಿ ಕರ್ನಾಟಕದ ಕಿರೀಟ ಹೊತ್ತಂತೆ ಸಂಭ್ರಮಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕವಿ ಗೋರವಿ ಆಲ್ದೂರು, ಎಂ
ಎಲ್ ಅಶೋಕ್ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ