ಚಿಕ್ಕಮಗಳೂರು:ಎಂಎಲ್‌ಎಂಎನ್ ಬಿಎಡ್ ಕಾಲೇಜು ಆವರಣದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಜ್ಞಾನ ವಿಜ್ಞಾನ ಕಲೆಯ ಅನಾವರಣವಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ ಎಚ್.ಎಸ್ ಹೇಳಿದರು.
ನಗರದ ಎಂಎಲ್‌ಎಂಎನ್ ಬಿಎಡ್ ಕಾಲೇಜಿನಲ್ಲಿ ಮಲೆನಾಡು ವಿದ್ಯಾಸಂಸ್ಥೆ, ಎಂಎಲ್‌ಎಂಎನ್ ಬಿಎಡ್ ಕಾಲೇಜು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧ ಅರ್ಥ್ ಟ್ರಸ್ಟ್, ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಜ್ಞಾನ ವಿಜ್ಞಾನ ಕಲಾ ವೈಭವ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪುರಾತನ ವಸ್ತುಗಳು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸ್ತುಗಳನ್ನು ನೋಡಿ ಸುಮ್ಮನಾಗದೇ ವಿದ್ಯಾರ್ಥಿಗಳು ಟಿಪ್ಪಣ ಮಾಡಿಕೊಂಡು ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಜ್ಞಾನಾಸಕ್ತರನ್ನು ಕೈ ಬೀಸಿ ಕರೆಯುವ ಈ ವಸ್ತು ಪ್ರದರ್ಶನ ಹಲವು ಕ್ಷೇತ್ರಗಳ ಮಾಹಿತಿ ಅನಾವರಣಕ್ಕೆ ವೇದಿಕೆಯಾಗಿದೆ. ಕೀಟ ಪ್ರಪಂಚ, ಪುರಾತನ ವಸ್ತುಗಳು, ನೂರಾರು ಅಂಚೆ ಚೀಟಿಗಳು, ಲಕೋಟೆಗಳು, ನಾಣ್ಯಗಳು, ನೋಟುಗಳು ಈ ವಸ್ತು ಪ್ರದರ್ಶನದ ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎಲ್.ವಿಜಯಕುಮಾರ್, ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರು ಅಪರೂಪದ ಪುರಾತನ ವಸ್ತುಗಳು, ನಾಣ್ಯಗಳು, ಅಂಚೆ ಚೀಟಿಳು ಸೇರಿದಂತೇ ಅಪೂರ್ವವಾದ ವಸ್ತು ಸಂಗ್ರಹವನ್ನು ಹೊಂದಿದ್ದಾರೆ. ಜ್ಞಾನದ ಅನಾವರಣಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಕೀಟ ಪ್ರದರ್ಶನ, ನಾಣ್ಯ ಮತ್ತು ನೋಟು, ಪುರಾತನ ವಸ್ತುಗಳು ಮತ್ತು ಅಂಚೆ ಚೀಟಿಗಳ ಕೊಠಡಿಗಳ ಉದ್ಘಾಟನೆಯನ್ನು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಕೇಶವಮೂರ್ತಿ, ಉಪಾಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೆಗೌಡ, ರಾಧಾಸುಂದರೇಶ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಎಂಎನ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗಣೇಶ್, ೧ ಅರ್ಥ್ ಟ್ರಸ್ಟ್ ನ ಅಧ್ಯಕ್ಷರಾದ ಫಣೀಂದ್ರ, ಮ್ಯಾನೇಜಿಂಗ್ ಟ್ರಸ್ಟಿ ಭರತ್ ಸಿ.ವಿ, ಸದಸ್ಯೆ ಚೈತ್ರ, ವಸ್ತು ಸಂಗ್ರಹಕಾರರಾದ ಎಂ.ಎಲ್.ಅಶೋಕ್, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಶಿವಾನಂದಸ್ವಾಮಿ, ಎಂಇಎಸ್ ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಎನ್.ಶಂಕರನಾರಾಯಣ ಭಟ್, ಶೈಕ್ಷಣ ಕ ಸಲಹೆಗಾರರಾದ ಮಂಜುನಾಥ್ ಭಟ್, ಶಿಕ್ಷಣ ಸಂಯೋಜಕರಾದ ಟಿಜಿಕೆ ಅರಸ್, ವ್ಯವಸ್ಥಾಪಕಿ ಲಕ್ಷಿö್ಮ, ಸಹಾಯಕ ಪ್ರಾಧ್ಯಾಪಕರಾದ ಡಾ.ರುದ್ರಪ್ಪ ಎನ್ ತಳವಾರ, ಪ್ರಶಿಕ್ಷಣಾರ್ಥಿ ಪ್ರಿಯಾಂಕ, ರುಕ್ಸಾನ ಎಂ, ಕಾಚೂರ್, ಕೀಟ ತಜ್ಞರಾದ ಡಾ.ಅವಿನಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಸಹಾಯಕ ನವದೀಪ್, ಸಿಬ್ಬಂದಿ ಪೂರ್ಣೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ಮುಂತಾದವರು ಇದ್ದರು.
ಜನವರಿ ೮ರವರೆಗೆ ನಡೆಯುವ ವಸ್ತು ಪ್ರದರ್ಶನ
ಜನವರಿ ೬ ರಿಂದ ಆರಂಭವಾಗಿರುವ ವಸ್ತು ಪ್ರದರ್ಶನ ಜನವರಿ ೮ ರವರೆಗೆ ನಡೆಯಲಿದೆ. ನೂರಾರು ಕೀಟಗಳು, ಅಪರೂಪದ ವಸ್ತುಗಳು, ಅಂಚೆಚೀಟಿಗಳು, ಪುರಾತನ ನಾಣ್ಯಗಳು ವಸ್ತು ಪ್ರದರ್ಶನದಲ್ಲಿ ಇರಲಿವೆ. ಬೆಳಿಗ್ಗೆ ೯.೩೦ ರಿಂದ ಸಂಜೆ ೭ ಗಂಟೆಯವರೆಗೆ ವಸ್ತು ಪ್ರದರ್ಶನ ಇರಲಿದ್ದು ಹೆಚ್ಚಿನ ಮಾಹಿತಿಗೆ ೯೪೪೮೫೩೦೫೧೯, ೯೬೬೩೪೦೪೨೯೨, ೯೯೮೬೧೪೦೫೯೭ ಗೆ ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ