ಶುಕ್ರವಾರ, ಆಗಸ್ಟ್ 14, 2026

ಸ್ವಾತಂತ್ರೋತ್ಸವ ವಸ್ತು ಪ್ರದರ್ಶನ ಉದ್ಘಾಟನೆ



ಕೊಟ್ಟಿಗೆಹಾರ:೮೦ನೇ ಸ್ವಾತಂತ್ರೋತ್ಸವದ ಅಂಗವಾಗಿ  ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಪ್ರತಿಷ್ಠಾನ ಮತ್ತು ಅಂಚೆ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರೋತ್ಸವ ವಿಶೇಷ ವಸ್ತು ಪ್ರದರ್ಶನ ಮತ್ತು ಆಧಾರ್ ನೋಂದಣಿ ಪರಿಷ್ಕರಣೆ ಶಿಬಿರವನ್ನು ಕಲಾವಿದರು ಹಾಗೂ ತೇಜಸ್ವಿ ಒಡನಾಡಿಗಳಾದ ಸುರೇಶ್ ಚಂದ್ರ ದತ್ತ ಉದ್ಘಾಟಿಸಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವಿಶೇಷ ಅಂಚೆ ಚೀಟಿಗಳು, ತಾಮ್ರಪತ್ರ, ಪದಕ, ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಮುದ್ರಿಸಿರುವ ಬೆಳ್ಳಿಯ ನಾಣ್ಯಗಳು, ವಂದೇ ಮಾತರಂ ೧೫೦ನೇ  ವರ್ಷಾಚರಣೆ, ಜಲಿಯನ್ ವಾಲಾಬಾಗ್ ೧೦೦ನೇ ವರ್ಷಾಚರಣೆಯ ನೆನಪಿನ ವಿಶೇಷ ನಾಣ್ಯಗಳು, ಮಹಾತ್ಮ ಗಾಂಧೀಜಿ, ನೆಹರು, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಶತಾಭ್ದಿ ನಾಣ್ಯ, ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳು ಗಮನ ಸೆಳೆದವು. ಅಂಚೆ ಇಲಾಖೆ ವತಿಯಿಂದ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ವಸ್ತು ಸಂಗ್ರಹಕಾರರಾದ ಎಂ.ಎಲ್.ಅಶೋಕ್, ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀನಾಥ್, ಮೂಡಿಗೆರೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಷಣ್ಮುಖ ಹೆಚ್ ಚವ್ಹಾಣ, ಅಂಚೆ ಮೇಲ್ವಿಚಾರಕರಾದ ಕಲ್ಲೇಶ್ ಕೆ.ಎಸ್, ರಾಜೇಶ್ವರಿ ಡಿ, ಸಹಾಯಕರಾದ ಅನಿತಾ ಹೆಚ್.ಎಸ್, ಕೊಟ್ಟಿಗೆಹಾರ ಅಂಚೆ ಕಚೇರಿ ಅಂಚೆ ಪಾಲಕರಾದ ಹೆಚ್.ಎಸ್.ಪ್ರಮೀಳಾ, ಅಂಚೆ ನಿರೀಕ್ಷಕ ನಾಗರಾಜು ಹಾಗೂ ವಿವಿಧ ಅಂಚೆ ಕಚೇರಿಯ ಅಂಚೆ ಸಿಬ್ಬಂದಿಗಳು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ