ಭಾರತಿ ಬೈಲ್ ನ ನಫೀಸಾ (72) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ನಫೀಸಾ ಅವರು
ಭಾರತಿಬೈಲ್ ನ ನಾಟಿ ವೈದ್ಯರಾದ ಪಂಡಿತರು ಎಂದೇ ಖ್ಯಾತರಾದ ದಿವಂಗತ ಹಸನಬ್ಬ ಅವರ ಪತ್ನಿ. ಹಸನಬ್ಬ ಅವರ ನಿಧನದ ನಂತರ ನಾಟಿ ಔಷಧಿ ನೀಡುವುದನ್ನು ಮುಂದುವರಿಸಿದ ನಫೀಸಾ ಅವರು
ನಾಟಿ ಜೌಷಧಿ ನೀಡುವ ಮೂಲಕ ಹಲವರ ರೋಗಗಳನ್ನು ಗುಣಪಡಿಸಿದ್ದರು. ವಿಶೇಷವಾಗಿ ಮಕ್ಕಳಿಲ್ಲದವರಿಗೆ ನಾಟಿ ಔಷಧಿ ನೀಡುವ ಮೂಲಕ ಹಲವು ದಂಪತಿಗಳು ಮಕ್ಕಳನ್ನು ಪಡೆಯಲು ಕಾರಣವಾಗಿದ್ದರು.
ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬಣಕಲ್ ಕಬರ್ ಸ್ಥಾನದಲ್ಲಿ ನಡೆಯಲಿದೆ.