ಕೊಟ್ಟಿಗೆಹಾರ:ಸಿಎಂಜಿ ಪ್ರತಿಷ್ಠಾನದಿಂದ ೨೦೨೩ನೇ ಸಾಲಿನ ಕುವೆಂಪು ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕಾರಕ್ಕೆ ವಿಮರ್ಶಕ ಹಾಗೂ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯೂ ೫೦ ಸಾವಿರ ನಗದು, ಸ್ಮರಣಿಕೆ ಫಲ ತಾಂಬೂಲಗಳನ್ನು ಒಳಗೊಂಡಿದ್ದು ಡಿಸೆಂಬರ್ ೨೯ ರಂದು ಶಿರಾದಲ್ಲಿ ನಡೆಯುವ ವಿಶ್ವಮಾನವ ದಿನದಂದು ಪ್ರಶಸ್ತಿ ಪ್ರಧಾನಗೊಳ್ಳಲಿದೆ.
ಡಾ.ಎಚ್.ಎಸ್. ಸತ್ಯನಾರಾಯಣ ಅವರು ಹೊಸ ತಲೆಮಾರಿನ ಓದುಗರಿಗಾಗಿ ಕುವೆಂಪು ಅಲಕ್ಷಿತರೆದೆಯ ದೀಪ ಎಂಬ ಕೃತಿಯನ್ನು ರಚಿಸಿದ್ದು ಹಲವಾರು ಸಂಪಾದಿತ ಕೃತಿಗಳು ಇವರ ಲೇಖನಿಯಿಂದ ಮೂಡಿ ಬಂದಿದೆ. ಅಪೂರ್ವ ಒಡನಾಟ, ಅಕ್ಷರ ಲೋಕದ ಆನೆ, ನುಡಿಚಿತ್ರ, ಕಣ್ಣೋಟ, ಪನ್ನೇರಳೆ ಇವರ ಪ್ರಕಟಿತ ಕೃತಿಗಳಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ