ಕೊಟ್ಟಿಗೆಹಾರ:ಹೆದ್ದಾರಿ ಅಗಲೀಕರಣದ ಭಾಗವಾಗಿ ಕೊಟ್ಟಿಗರಹಾರದ ರಸ್ತೆ ಇಬ್ಬದಿಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ಬಾಕ್ಸ್ ಚರಂಡಿಯನ್ನು ಮುಚ್ಚದೇ ಇರುವುದರಿಂದ ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದು ಹೊರ ಬರಲಾಗದೇ ಒದ್ದಾಡುತ್ತಿದ್ದು ಸ್ಥಳೀಯರು ಹರಸಾಹಸ ಪಟ್ಟು ಜಾನುವಾರನ್ನು ಹೊರ ತೆಗೆದಿದ್ದಾರೆ.
ಬಾಕ್ಸ್ ಚರಂಡಿ ಕಾಮಗಾರಿ ಮುಗಿದು ಹಲವು ಕಾಲವಾದರೂ ಕೂಡ ಕೆಲವೆಡೆ ಬಾಕ್ಸ್ ಚರಂಡಿಗಳನ್ನು ಮುಚ್ಚಿಲ್ಲ. ಇದರಿಂದ ನಾಯಿ, ಹಸು ಮುಂತಾದ ಪ್ರಾಣಿಗಳು ಬಾಕ್ಸ್ ಚರಂಡಿಯೊಳಗೆ ಬೀಳುತ್ತಿದ್ದು ಹೆದ್ದಾರಿ ಪ್ರಾಧಿಕಾರ ಬಾಕ್ಸ್ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ