ಮಂಗಳವಾರ, ಡಿಸೆಂಬರ್ 3, 2024

ಡಿಸೆಂಬರ್ ೭ ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ



 ಬಣಕಲ್:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ ೭ ರಂದು ಪುಸ್ತಕ ಪರಿಶೆ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ ೭ ರ ಶನಿವಾರ ಬೆಳಿಗ್ಗೆ ೯-೩೦ ಕ್ಕೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂವಾದಗಳು ನಡೆಯಲಿದೆ. ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಶದ ನಡೆಯಲಿದ್ದು ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ.
 ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡನೆ ಮಾಡಲಿದ್ದು ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣ ಸೇರಿದಂತೇ ಬರಹದ ಹೊಸ ಮಾದ್ಯಮ ಸಾಧ್ಯತೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಯ ಕುರಿತು ಸಂವಾದ ನಡೆಯಲಿದ್ದು ಸಾಹಿತ್ಯ ವಲಯಕ್ಕೆ ಉಪಯುಕ್ತ ಕಾರ್ಯಕ್ರಮ ಇದಾಗಲಿದೆ.
ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕರಾದ ಆರ್.ಜಿ.ನಾಗರಾಜ್, ಹರಿವು ಬುಕ್ಸ್ ನ ಪ್ರಕಾಶಕರಾದ ರತೀಶ್ ಬಿ.ಆರ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ. ಬರಹದ ಹೊಸ ಮಾದ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಚಿತ್ರಕತೆ ಬರಹಗಾರರು, ಪತ್ರಕರ್ತರಾದ ವಿಕಾಸ್ ನೇಗಿಲೋಣ , ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಗಟಕರಾದ ಕುನಾಲ್ ಕನ್ನಡಿಗ ಅವರು ಭಾಗವಹಿಸಲಿದ್ದಾರೆ. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕರಾದ ಜಯರಾಮಾಚಾರಿ ಭಾಗವಹಿಸಲಿದ್ದಾರೆ.
ಪುಸ್ತಕ ಪರಿಶೆ ಕಾರ್ಯಕ್ರಮದಲ್ಲಿ ೧೦೦ ಲೇಖಕರಿಗೆ ಮಾತ್ರ ಅವಕಾಶವಿದ್ದು ೫೦೦ ರೂ ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೮೨೭೭೫೮೯೮೫೯, ೯೬೬೩೦೯೮೮೭೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 


ಡಿಸೆಂಬರ್ ೮ ಕ್ಕೆ ದೇವರಮನೆಗೆ ಚಾರಣ
ಅಕ್ಷರ ಪರಿಶೆ ಕಾರ್ಯಕ್ರಮದ ಮರುದಿನ ಡಿಸೆಂಬರ್ ೮ ರಂದು ದೇವರಮನೆಗೆ ಚಾರಣ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಕ್ಷರ ಪರಿಶೆ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದವರು ಮಾತ್ರ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಚಾರಣದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಊಟ, ವಾಹನ ವ್ಯವಸ್ಥೆ, ಕಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಕೆ


 ಬಣಕಲ್:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಖಿಯರ ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ವತಿಯಿಂದ ಶಾಸಕರಾದ ನಯನ ಮೋಟಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.

ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷೆ ಗಾನವಿ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಮುಖ್ಯಪುಸ್ತಕ ಬರಹಗಾರರಿಗೆ ಮಾಸಿಕ ೨೦ ಸಾವಿರ ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಗ್ರಾ.ಪಂ ಮಟ್ಟದ ಒಕ್ಕೂಟದ ಸಖಿಯರಿಗೆ ಮಾಸಿಕ ೧೫ ಸಾವಿರ ವೇತನ ನೀಡಬೇಕು. ಸರ್ಕಾರದಿಂದ ನೇರವಾಗಿ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ವೇತನ ಜಮೆಯಾಗಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ, ಮುಖ್ಯಪುಸ್ತಕ ಬರಹಗಾರರು, ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಕ್ಕೂಟದ ಸಖಿಯರ ಬೇಡಿಕೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಖಿಯರ ಮಹಾಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ವೇತಾ ಶೆಟ್ಟಿ, ಖಜಾಂಚಿ ಪ್ರಾಪ್ತಿ ಹಾಗೂ ಮುಖ್ಯ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಸಖಿಯರು ಇದ್ದರು.

ಭಾನುವಾರ, ನವೆಂಬರ್ 17, 2024

ತೇಜಸ್ವಿ ಪ್ರತಿಷ್ಠಾನದಲ್ಲಿ ಕನ್ನಡ ಸಂಸ್ಕೃತಿ ಮತ್ತು ತೇಜಸ್ವಿ ವಿಚಾರಗೋಷ್ಠಿ

ಕೊಟ್ಟಿಗೆಹಾರ:ಬದುಕಿದಂತೇ ಬರೆದ ಬರೆದಂತೇ ಬದುಕಿದ ತೇಜಸ್ವಿ ಅವರನ್ನು ವ್ಯಕ್ತಿಪೂಜೆ ಮಾಡದೇ ವಿಚಾರಪೂಜೆ ಅಥವಾ ವಿಚಾರಗಳನ್ನು ಅರಿಯುವುದು ಮುಖ್ಯವಾದದ್ದು ಎಂದು ಲೇಖಕ ಡಾ.ಸಂಪತ್ ಬೆಟ್ಟಗೆರೆ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಣಕಲ್ ಕಸಾಪ ವತಿಯಿಂದ ನಡೆದ ಕನ್ನಡ ಸಂಸ್ಕೃತಿ ಮತ್ತು ತೇಜಸ್ವಿ ವಿಚಾರ ಗೋಷ್ಠಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ತೇಜಸ್ವಿ ಅವರು ಮೂಡಿಗೆರೆಗೆ ಬಂದದ್ದು ಭುವನದ ಭಾಗ್ಯ. ತೇಜಸ್ವಿ ಅವರಿಗೆ ವಿಭಿನ್ನವಾದ ಅನುಭವವನ್ನು ನೀಡಿದ್ದು ಮೂಡಿಗೆರೆ. ಭೂಮಿ ಮತ್ತು ವ್ಯಕ್ತಿಪ್ರಜ್ಞೆ ಒಂದಾಗಿ ಘಟಿಸಿದ ವ್ಯಕ್ತಿತ್ವ ತೇಜಸ್ವಿ ಅವರದು. ವಿಜ್ಞಾನವನ್ನು ಕಲಾಕೃತಿಯ ದೃಷ್ಟಿಯಲ್ಲಿ ನೋಡುವ ಪ್ರಯತ್ನವನ್ನು ತೇಜಸ್ವಿ ಅವರು ಮಾಡಿದ್ದಾರೆ. ಸಾಹಿತ್ಯ ಬೇರೆ ಮನುಷ್ಯ ಬೇರೆ ಅಲ್ಲ. ಬದುಕು ಸಂಸ್ಕೃತಿಯಾದರೇ ಸಂಸ್ಕೃತಿಯ ರೀತಿಯನ್ನು ದಾಖಲಿಸುವುದು ಸಾಹಿತ್ಯವಾಗುತ್ತದೆ ಎಂದರು.
ಇAದು ತೇಜಸ್ವಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ತುಂಬಾ  ಲಘುವಾಗಿ ಚಿತ್ರಿಸುವ ಪ್ರಯತ್ನಗಳು ಆಗುತ್ತಿರುವುದು ತುಂಬಾ ವಿಷಾದಕರ. ತೇಜಸ್ವಿ ಅವರು ಜಾತ್ಯಾತೀತವಾದಿ ನಿಲುವಿನ ಚಿಂತಕ. ಅವರು ಎಂದಿಗೂ ಜಾತಿವಾದಿಯಲ್ಲ, ಪ್ರೀತಿಯ ಸಂತನAತೆ ಬದುಕಿದವರು. ಆದರೆ ಇಂದು ಸುಳ್ಳಾದ ಪ್ರಕ್ಷಿಪ್ತಗಳನ್ನು ಸೃಷ್ಟಿಸಿದ ಬರವಣ ಗೆ ಮತ್ತು ಭಾಷಣಗಳಿಂದ ಅವರ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲು ಕೆಲವು ಸ್ವಹಿತಾಸಕ್ತಿ ಚಿಂತನೆಯವರು ಮಾಡುತ್ತಿರುವುದನ್ನು ನಾವು ಖಂಡಿಸುವ ಪ್ರಯತ್ನ ಮಾಡಬೇಕು ಎಂದರು.
ಕಸಾಪ ಜಿಲ್ಲಾ  ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಕವಿತೆಗೆ ಮಾತ್ರ ಸೀಮಿತವಾಗದೇ ತಮ್ಮ ಬರವಣ ಗೆಯನ್ನು ನಿರಂತರವಾಗಿ ಮುಂದುವರಿಸಿಕೊAಡು ಹೋಗಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದು ಇಂತಹ ಕಾರ್ಯಕ್ರಮಗಳ ಸದ್ಬಳಕೆಯನ್ನು ಯುವಕವಿಗಳು ಮಾಡಿಕೊಳ್ಳಬೇಕಿದೆ ಎಂದರು.   
 ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ ಬಣಕಲ್ ಹೋಬಳಿ ಕಸಾಪವೂ ಸಕ್ರಿಯವಾಗಿ ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಉತ್ಸಾಹಿ ಯುವಕರ ತಂಡ ಈ ಘಟಕದಲ್ಲಿದ್ದು ನಿರಂತರವಾಗಿ ಸಾಹಿತ್ಯ ಕಾರ್ಯಗಳು ನಡೆಯಲಿ ಎಂದರು. 
ಭಾರತಿಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯಗೌಡ ಮಾತನಾಡಿ ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಯುವಪೀಳಿಗೆ ಅರಿಯಬೇಕಿದೆ. ಜಾನಪದ ಸೊಗಡಿನ ಗೀತೆಗಳು ಈ ಪರಂಪರೆಯ ಭಾಗವಾಗಿದ್ದು ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು. 
ಬಣಕಲ್ ಕಸಾಪ ಅಧ್ಯಕ್ಷ ಬಿ.ಕೆ.ಲೋಕೇಶ್ ಮಾತನಾಡಿ ಕಾವ್ಯ ಸ್ಪಂದನದಲ್ಲಿ ಭಾಗವಹಿಸಿದ ಯುವಕವಿಗಳ ಕವನಗಳು ಪುಸ್ತಕ ರೂಪದಲ್ಲಿ ತರುವ ಯೋಚನೆ ಇದೆ. ಕಾವ್ಯ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಕಾವ್ಯದ ಆಸ್ವಾದನೆ ಬದುಕಿನ ಜಂಜಾಟಗಳ ಒತ್ತಡವನ್ನು ಕೂಡ ಮರೆಸಬಲ್ಲದಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಬಿ.ಇ.ಬಿಳಿಯಪ್ಪ, ಕಸಾಪದ ಪ್ರಕಾಶ್ ಬಕ್ಕಿ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷ ಎಂ.ಎಸ್.ನಾಗರಾಜ್, ಕಸಾಪ ಪದಾಧಿಕಾರಿಗಳಾದ ಪೂರ್ಣೇಶ್ ಹೆಬ್ಬರಿಗೆ, ಭಕ್ತೇಶ್, ವಸಂತ್ ಹಾರ್ ಗೋಡು, ಸುಪ್ರೀತ್ ಬೆಟ್ಟಗೆರೆ, ರಾಮಚಂದ್ರ, ಸಂಜಯಗೌಡ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳಿ, ಸಿಬ್ಬಂದಿ ಸತೀಶ್, ಸಂಗೀತಾ ಮತ್ತಿತರರು ಇದ್ದರು.


ಜನಮನ ಸೂರೆಗೊಂಡ ಕಾವ್ಯಸ್ಪಂದನ

ವಿಚಾರ ಸಂಕಿರಣದ ನಂತರ ಕಾವ್ಯಸ್ಪಂದನ ಕಾರ್ಯಕ್ರಮದಲ್ಲಿ ಬಳ್ಳಾರಿ, ಬಿಜಾಪುರ ಸೇರಿದಂತೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಕವನ ವಾಚನ ಮಾಡಿದರು. ತೇಜಸ್ವಿ ಬದುಕು ಬರಹ ವಿಷಯದ ಬಗ್ಗೆ ಕವಿಗಳಾದ ಪೂರ್ಣೇಶ್ ಹೆಬ್ಬರಿಗೆ, ಕುಸುಮ ಮಂಜುನಾಥ್, ಡಿ.ಫ್ರಾನ್ಸಿಸ್ ಕ್ಷೇವಿಯರ್, ಅಲ್ತಾಪ್ ಬಿಳುಗುಳ, ಲಕ್ಷö್ಮಣ್ ಬಿ ಹೊಸಹಳ್ಳಿ, ಶಕುಂತಲಾ ಪಾಟೀಲ್, ಮಂಜುನಾಥ್ ರಾಠೋಡ್, ಸೌಭಾಗ್ಯ ಮಹಾಂತೇಶ್, ಹೆಸಗಲ್ ವೆಂಕಟೇಶ್, ವೇದ ಅಶೋಕ್, ಡಾ.ವೀರೇಶ್ ಕುಮಾರ್, ಶಾಲಿನಿ ಕುಂದೂರು ಕವನ ವಾಚನ ಮಾಡಿದರು. ಮಂಜುನಾಥ್ ರಾಠೋಡ್ ಬಿಜಾಪುರ (ಪ್ರಥಮ), ಲಕ್ಷö್ಮಣ್ ಬಿ ಹೊಸಳ್ಳಿ (ದ್ವಿತೀಯ), ವೇದಾ ಅಶೋಕ್ (ತೃತೀಯ) ಬಹುಮಾನವನ್ನು ಪಡೆದರು.

ಶುಕ್ರವಾರ, ಅಕ್ಟೋಬರ್ 4, 2024

ಇಂದಿನಿಂದ (ಅಕ್ಟೋಬರ್ ೫) ರಾಜ್ಯ ಮಟ್ಟದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ

ಚಿಕ್ಕಮಗಳೂರು:ಭಾರತ್ ಮತ್ತು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಿಂದ ಇಂದಿನಿಂದ ರಾಜ್ಯಮಟ್ಟದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ನಡೆಯಲಿದೆ ಎಂದು ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನಗರದ ಆದಿ ಚುಂಚನಗಿರಿ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದು ರಾಣ  ಚೆನ್ನಮ್ಮ ವಿವಿ ಕುಲಪತಿ ಎಸ್.ವಿ.ತ್ಯಾಗರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ಸವದಲ್ಲಿ ರಾಜ್ಯದ ೬ ರಿಂದ ೧೦ ವರ್ಷ ವಯೋಮಾನದ ಎಳೆಯರು ಭಾಗವಹಿಸಲಿದ್ದಾರೆ. ಅವರಿಗೆ ಸಾಹಸಮಯ ಚಟುವಟಿಕೆಗಳು, ಹೊಸಸಂಚಾರ, ಶೈಕ್ಷಣ ಕ ಸ್ಥಳಗಳ ಸಂದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲ ಮಕ್ಕಳಿಗೂ ಉತ್ತಮ ಊಟ, ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು. ಉತ್ಸವದ ಅಂಗವಾಗಿ ಒಂದು ಆಕರ್ಷಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಉತ್ಸವದ ಹಿನ್ನಲೆಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೀಟ ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ, ಅಕ್ಟೋಬರ್ 1, 2024

ಇಡಕಣಿ ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಕಳಸ:ಸ್ವಸಹಾಯ ಸಂಘದ ಸದಸ್ಯರು ಸಂಜೀವಿನಿ ಒಕ್ಕೂಟಕ್ಕೆ ಸೇರಿ ಒಕ್ಕೂಟದ ಅನುದಾ£ದ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಇಡಕಣ  ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ  ಅಧ್ಯಕ್ಷರಾದ ವೈಶಾಲಿ ಹೇಳಿದರು.
 ಹಿರೇಬೈಲ್‌ನಲ್ಲಿ ನಡೆದ ಕಳಸ ತಾಲ್ಲೂಕಿನ ಇಡಕಣ  ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ ಸ್ವಾವಲಂಬನೆ ಮಾತ್ರವಲ್ಲದೇ ಸರ್ವಾಂಗೀಣ ಏಳಿಗೆಗೆ ಸಂಜೀವಿನಿ ಒಕ್ಕೂಟ ಸಹಕಾರಿಯಾಗಿದೆ. ಸಾಮಾಜಿಕವಾಗಿ ಸಂಘಟಿತವಾಗಿ ಅಭಿವೃದ್ದಿ ಹೊಂದಲು ಇಂತಹ ಒಕ್ಕೂಟಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಆತ್ಮಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂಜೀವಿನಿ ಒಕ್ಕೂಟ ಕಾರಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಅಬ್ದುಲ್ ನಾಝೀಮ್, ಮಹಿಳೆಯರು ಸಂಘಗಳ ಮೂಲಕ ಉಳಿತಾಯ ಮಾಡಿ ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಸಂಘಗಳ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.
ವರದಿ ಮಂಡನೆ ಮಾಡಿ ಮಾತನಾಡಿದ ಮುಖ್ಯ ಪುಸ್ತಕ ಬರಹಗಾರರಾದ ದೀಕ್ಷಾ, ಒಕ್ಕೂಟದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಒಕ್ಕೂಟದ ಸಮುದಾಯ ಬಂಡವಾಳ ನಿಧಿಯನ್ನು ಬಳಸಿಕೊಂಡು ಉತ್ತಮ ಆದಾಯ ಗಳಿಸುವ ಜೊತೆಗೆ ಸಂಘದ ಸದಸ್ಯರು  ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಸಾಧ್ಯವಾಗಿದೆ. ಬಡತನ ತೀವ್ರತೆಯನ್ನು ಕಡಿಮೆಗೊಳಿಸುವುದು, ಸಾಮಾಜಿಕ ಸುಧಾರಣೆ, ಮಹಿಳಾ ಸಬಲೀಕರಣ, ಕೌಶಲ್ಯಭಿವೃದ್ದಿ ನೀಡುವುದು ಸೇರಿದಂತೇ ಹಲವು ಅಂಶಗಳು ಸಂಜೀವಿನಿ ಒಕ್ಕೂಟದ ಗುರಿಯಾಗಿದೆ ಎಂದರು.
 ವಾರ್ಷಿಕ ಸಭೆಯಲ್ಲಿ ಒನ್ ಜಿ ಪಿ ಒನ್ ಉತ್ಪನ್ನವಾದ ಉಪ್ಪಿನಕಾಯಿಯನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ ಕಾರ್ಯನಿರ್ವಹಿಸಿದ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು .
 
ಈ ಸಂದರ್ಭದಲ್ಲಿ  ಒಕ್ಕೂಟದ ಕಾರ್ಯದರ್ಶಿ ಕವಿತಾ, ವಲಯ ಮೇಲ್ವಚಾರಕರಾದ ಅಭಿಜಿತ್, ಕಳಸ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಖಜಾಂಚಿ ಛಾಯಾ, ಇಡಕಣ  ಗ್ರಾ.ಪಂ ಪಿಡಿಓ ಪ್ರಕಾಶ್, ಅಧ್ಯಕ್ಷರಾದ ರವೀಂದ್ರ, ಒಕ್ಕೂಟದ ಸಿಬ್ಬಂದಿಗಳಾದ ಸಂದ್ಯಾ ಎನ್, ಸರೋಜ, ಜಯಶ್ರೀ, ಕವಿತಾ, ಒಕ್ಕೂಟ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

ಭಾನುವಾರ, ಸೆಪ್ಟೆಂಬರ್ 29, 2024

ಅಕ್ಟೋಬರ್ ೪ ಕ್ಕೆ ರೇಬಿಸ್ ಉಚಿತಾ ಲಸಿಕಾ ಕಾರ್ಯಕ್ರಮ


ಬಣಕಲ್:ಅಕ್ಟೋಬರ್ ೪ ರಂದು ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ದ ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸಿಲಾಗಿದೆ ಎಂದು ಮೂಡಿಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಕ್ಟೋಬರ್ ೪ ರ ಶುಕ್ರವಾರ ಬೆಳಗ್ಗೆ ೧೦ ರಿಂದ ಸಂಜೆ ೪ ರವರೆಗೆ ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ  ಮೂಡಿಗೆರೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೂಡಿಗೆರೆ ನಗರ ವ್ಯಾಪ್ತಿಯ  ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಉಚಿತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ಶ್ವಾನ ಪ್ರಿಯರು ಹಾಗೂ ಅದರ ಮಾಲೀಕರುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ


ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾರ್ಗವಾಗಿಯೇ ಸಂಚರಿಸುತ್ತಿದ್ದರೂ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದು  ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯಗಳು ಜ್ಞಾನಾಸಕ್ತರಿಗೆ ಉಪಯುಕ್ತವಾಗಿವೆ. ಉತ್ತಮ ನಿರ್ವಹಣೆ ಮಾಡಲಾಗಿದ್ದು ಅಗತ್ಯವಿದ್ದಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಅನುದಾನವನ್ನು ತರಲು ಪ್ರಯತ್ನಿಸಲಾಗುವುದು ಎಂದರು.