ಶುಕ್ರವಾರ, ಫೆಬ್ರವರಿ 9, 2024

ಫೆ ೨೮ ಕ್ಕೆ ಸಾವರ್ಕರ್ ಯುವ ಪ್ರತಿಷ್ಠಾನದ ಉದ್ಘಾಟನೆ ಶಿವದೂತೆ ಗುಳಿಗೆ ತುಳುನಾಟಕ ಪ್ರದರ್ಶನ



ಬಣಕಲ್:ಸಾವರ್ಕರ್ ಯುವ ಪ್ರತಿಷ್ಠಾನದ  ಉದ್ಘಾಟನಾ ಕಾರ್ಯಕ್ರಮ ಮತ್ತು ಶಿವದೂತೆ ಗುಳಿಗೆ ತುಳುನಾಟಕ ಪ್ರದರ್ಶನ ಫೆಬ್ರವರಿ ೨೮ ರಂದು ನಡೆಯಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಾರ್ಯಕ್ರಮದ ವ್ಯವಸ್ಥಾಪಕರಾದ ವಿನಯ್ ಶೆಟ್ಟಿ, ಸಾವರ್ಕರ್ ಯುವ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಫೆಬ್ರವರಿ ೨೮ ರಂದು ಬಣಕಲ್ ಸುಭಾಷನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂಜೆ ೬ ಗಂಟೆಗೆ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.

 ವಿಭಿನ್ನ ಶೈಲಿಯ ಈ ತುಳು ನಾಟಕವನ್ನು ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸಿದ್ದು ಕಲಾಸಂಗಮ್ ತಂಡದ ಕಲಾವಿದರು ಅಭಿನಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಮವಾರ, ಜನವರಿ 29, 2024

ನ್ಯೂನತೆ ದೂರ ಮಾಡಿ ಒಳಿತು ಸ್ವೀಕಾರ ಮಾಡುವ ಪ್ರಕ್ರಿಯೆ ಪೂಜೆ

ಕೊಟ್ಟಿಗೆಹಾರ;ಪೂಜೆ ಒಂದು ಸುಧಾರಣಾ ಕ್ರಮವಾಗಿದ್ದು  ನಮ್ಮಲ್ಲಿ ಇರುವ ನ್ಯೂನತೆಗಳನ್ನ ದೂರ ಮಾಡಿ ಒಳಿತನ್ನು ಸ್ವೀಕಾರ ಮಾಡುವ ಪ್ರಕ್ರಿಯೆ ಪೂಜೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ  ಧಮೋತ್ಥಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ವತಿಯಿಂದ  ಮಾವಿನಕಟ್ಟೆಯಲ್ಲಿ ನಡೆದ  ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಗಾಗಲಿ ದೇವಸ್ಥಾನಕ್ಕಾಗಲಿ ಹೋದಾಗ ಒಂದು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯದನ್ನು ಸ್ವೀಕಾರ ಮಾಡಬೇಕು ಹಾಗೆ ಮಾಡುತ್ತಾ ಬಂದರೆ ನಮ್ಮಲ್ಲಿ ಸುಧಾರಣೆ ಉಂಟಾಗಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವೆ ಮೋಟ್ಟಮ ಮಾತನಾಡಿ ನಮ್ಮ ಸಂಸ್ಕೃತಿ ಪರಂಪರೆಯನ್ನು ನಾವು  ಕಡೆಗಣಿಸುತ್ತಿರುವ ಸಲುವಾಗಿ ಈಗಿನ ಯುವಕರು  ದಾರಿ ತಪ್ಪಿದ್ದಾರೆ. ಅಂತ ಯುವಕರನ್ನು ಸರಿಪಡಿಸಲು ಇಂಥ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು. 
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಮಾತನಾಡಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ  ಕಾರ್ಯಕ್ರಮದಿಂದ ಮೌಲ್ಯಗಳು ವೃದ್ಧಿಯಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾಗಿದೆ ಎಂದರು.
ನಿಡುವಾಳೆ ಗಬ್ಗಲ್‌ನ ಸಹಕಾರ ಸಂಘದ ಅಧ್ಯಕ್ಷರಾದ ಶಿವರಾಜಗೌಡ, ಜಿ.ಪಂ ಮಾಜಿ ಸದಸ್ಯ ಬಿ.ಎಲ್.ಸಂದೀಪ್,  ಕಾಫಿ ಬೆಳೆಗಾರರಾದ ಕಲ್ಮನೆ ಮಹೇಂದ್ರ, ಕೂವೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೇಮಾ, ಸದಸ್ಯೆ ಶಶಿತಾ, ಕಳಸ ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಮುಖ್ಯ ಶಿಕ್ಷಕಿ ಶೋಭ, ಪೂಜಾ ಸಮಿತಿ ಅಧ್ಯಕ್ಷರಾದ ರವೀಂದ್ರ, ಪದಾಧಿಕಾರಿಗಳಾದ ಸಂದೇಶ್, ಕವನ, ಮಮತ, ನಿಮಿತ, ಸಂಗೀತಾ, ಸಾಗರ್, ಚಂದ್ರಶೇಖರ್ ಮುಂತಾದವರು ಇದ್ದರು.

ಶುಕ್ರವಾರ, ಡಿಸೆಂಬರ್ 22, 2023

ಮಲೆನಾಡು ಗಿಡ್ಡ ತಳಿಗಳು ಈ ನೆಲದ ಅಸ್ಮಿತೆ:ಡಾ.ಸಿ.ರಮೇಶ್


ಕೊಟ್ಟಿಗೆಹಾರ:ಮಲೆನಾಡು ಗಿಡ್ಡ ತಳಿಗಳು ಈ ನೆಲದ ಅಸ್ಮಿತೆಯಾಗಿದ್ದು ಅವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ಹೇಳಿದರು.
ಮೂಡಿಗೆರೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮತ್ತು ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಜನ್ನಾಪುರದ ಪಶು ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕರು ಮತ್ತು ಹಸುಗಳ ಪ್ರದರ್ಶನ ಹಾಗೂ ಬರಡುರಾಸು ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಲೆನಾಡು ಗಿಡ್ಡ ಕರ್ನಾಟಕದ ವಿಶಿಷ್ಟ ಜಾನುವಾರು ತಳಿಯಾಗಿದೆ. ಮಲೆನಾಡು ಗಿಡ್ಡ ತಳಿಗಳ ಮಹತ್ವವನ್ನು ಅರಿತು ಇದರ ಅಭಿವೃದ್ದಿಗೆ ಮುಂದಾಗಬೇಕಿದೆ.  ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪಲಾನುಭವಿಗಳು ಪಡೆದುಕೊಳ್ಳಬೇಕಿದೆ ಎಂದರು.
ಗೋಣಿಬೀಡಿನ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಮಾತನಾಡಿ, ಸಾಕುಪ್ರಾಣಿಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧ ಪದಗಳಿಗೆ ನಿಲುಕಲಾರದು. ಸಾಕುಪ್ರಾಣಿಗಳ ಆರೋಗ್ಯ ಸಂರಕ್ಷಣೆ, ಆಹಾರ ಮುಂತಾದವುಗಳ ಮಾಹಿತಿ ಹಾಗೂ ಚಿಕಿತ್ಸೆಯನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುವ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಜೊತೆಗೆ ನಿಕಟ ಸಂಪರ್ಕವನ್ನು ಪ್ರಾಣಿಪ್ರಿಯರು ಇಟ್ಟುಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶ್ವಾನಗಳಿಗೆ ರೇಬಿಸ್ ಉಚಿತ ಲಸಿಕೆಯನ್ನು ಹಾಕಲಾಯಿತು.
 ಆಯ್ದ ರಾಸುಗಳ ವಾರಸುದಾರರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ.ಮನು, ಡಾ.ಅಶೋಕ್, ಜಾನುವಾರು ಅಭಿವೃದ್ದಿ ಅಧಿಕಾರಿ ಪದ್ಮೇಗೌಡ, ಜಾನುವಾರು ಅಧಿಕಾರಿ ನವೀನ್, ಜಾನುವಾರು ಅಧಿಕಾರಿ ನವೀನ್, ಪಶುಸಖಿಯರು, ರೋಟರಿ ಸಂಸ್ಥೆಯ ಕಾರ್ಯದರ್ಶಿ ನಯನಕುಮಾರ್, ಪೂರ್ವಾಧ್ಯಕ್ಷರಾದ ರತನ್, ಶೈಲೇಶ್, ಜಗದೀಶ್, ಚಿನ್ನಿಗ ಗ್ರಾ.ಪಂ ಅಧ್ಯಕ್ಷೆ ಲಕ್ಷಿö್ಮ, ಮಾಜಿ ಅಯಕ್ಷ ಸುನೀಲ್, ಸದಸ್ಯರಾದ ಪ್ರಹ್ಲಾದ್, ಭಾಗ್ಯ, ಸಲ್ಮಾ ಮುಂತಾದವರು ಇದ್ದರು.

ಭಾನುವಾರ, ನವೆಂಬರ್ 5, 2023

ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಭಾರತಿಬೈಲ್ ನ ರಾಜೇಶ್ ಬಿ.ಆರ್ ಗೆ ಪ್ರಥಮ ಸ್ಥಾನ

ಕೊಟ್ಟಿಗೆಹಾರ:ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ನಡೆದ  ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಮೂಡಿಗೆರೆ ತಾಲ್ಲೂಕಿನ  ಭಾರತಿಬೈಲ್‌ನ ರಾಜೇಶ್ ಬಿ ಆರ್ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸಿ ಪಿ ಸಿ ಪಾಲಿಟೆಕ್ನಿಕ್ ಮೈಸೂರು, ಇವರ ವತಿಯಿಂದ ನಡೆದ  ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಮೂಡಿಗೆರೆ ತಾಲ್ಲೂಕಿನ  ಭಾರತಿಬೈಲ್‌ನ ರಾಜೇಶ್ ಬಿ ಆರ್ ಮತ್ತು ಉಡುಪಿಯ ದರ್ಶನ್ ಸಿ ಅಂಬಲ್ಪಡಿ ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ಪ್ರಾಂಶುಪಾಲರಾದ ಉಮಾ ಬಿ ಮತ್ತು ಕ್ರೀಡಾ ಯೋಜನಾಧಿಕಾರಿಳಾದ ಮಧು ಎಂಜಿ ಇದ್ದರು. ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ ಆರ್, ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೊ ವ್ಯಾಸಂಗ ಮಾಡುತ್ತಿದ್ದಾರೆ. ರಾಜೇಶ್ ಬಿ.ಆರ್ ಭಾರತಿಬೈಲ್‌ನ ರಾಮಚಂದ್ರ ಮತ್ತು ಸರೋಜ ದಂಪತಿಗಳ ಪುತ್ರ.
ಇದೇ ಕ್ರೀಡಾಕೂಟದಲ್ಲಿ  ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ವಿದ್ಯಾರ್ಥಿಗಳಾದ .ಸಾಕ್ಷಿತ್ ದೇವಾಡಿಗ ಕಾಪು ಉಡುಪಿ, ಸುಚಿತ್ ಕುಂದಾಪುರ, ಕಾರ್ತಿಕ್ ಶೆಟ್ಟಿಗಾರ್, ಸಂದೀಪ್ ಎಚ್ ಎಂ, ಶ್ರೀ ಜಿ ಆಚಾರ್ಯ ಕುಂದಾಪುರ, ಸನಾತ್ ಆಚಾರ್ಯ ಕಾಪು, ವಿನಯ್ ಕುಮಾರ್, ಆದಿತ್ಯ ಉಡುಪಿ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.