ಸೋಮವಾರ, ಜನವರಿ 29, 2024

ನ್ಯೂನತೆ ದೂರ ಮಾಡಿ ಒಳಿತು ಸ್ವೀಕಾರ ಮಾಡುವ ಪ್ರಕ್ರಿಯೆ ಪೂಜೆ

ಕೊಟ್ಟಿಗೆಹಾರ;ಪೂಜೆ ಒಂದು ಸುಧಾರಣಾ ಕ್ರಮವಾಗಿದ್ದು  ನಮ್ಮಲ್ಲಿ ಇರುವ ನ್ಯೂನತೆಗಳನ್ನ ದೂರ ಮಾಡಿ ಒಳಿತನ್ನು ಸ್ವೀಕಾರ ಮಾಡುವ ಪ್ರಕ್ರಿಯೆ ಪೂಜೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ  ಧಮೋತ್ಥಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ವತಿಯಿಂದ  ಮಾವಿನಕಟ್ಟೆಯಲ್ಲಿ ನಡೆದ  ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಗಾಗಲಿ ದೇವಸ್ಥಾನಕ್ಕಾಗಲಿ ಹೋದಾಗ ಒಂದು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯದನ್ನು ಸ್ವೀಕಾರ ಮಾಡಬೇಕು ಹಾಗೆ ಮಾಡುತ್ತಾ ಬಂದರೆ ನಮ್ಮಲ್ಲಿ ಸುಧಾರಣೆ ಉಂಟಾಗಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವೆ ಮೋಟ್ಟಮ ಮಾತನಾಡಿ ನಮ್ಮ ಸಂಸ್ಕೃತಿ ಪರಂಪರೆಯನ್ನು ನಾವು  ಕಡೆಗಣಿಸುತ್ತಿರುವ ಸಲುವಾಗಿ ಈಗಿನ ಯುವಕರು  ದಾರಿ ತಪ್ಪಿದ್ದಾರೆ. ಅಂತ ಯುವಕರನ್ನು ಸರಿಪಡಿಸಲು ಇಂಥ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು. 
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಮಾತನಾಡಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ  ಕಾರ್ಯಕ್ರಮದಿಂದ ಮೌಲ್ಯಗಳು ವೃದ್ಧಿಯಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾಗಿದೆ ಎಂದರು.
ನಿಡುವಾಳೆ ಗಬ್ಗಲ್‌ನ ಸಹಕಾರ ಸಂಘದ ಅಧ್ಯಕ್ಷರಾದ ಶಿವರಾಜಗೌಡ, ಜಿ.ಪಂ ಮಾಜಿ ಸದಸ್ಯ ಬಿ.ಎಲ್.ಸಂದೀಪ್,  ಕಾಫಿ ಬೆಳೆಗಾರರಾದ ಕಲ್ಮನೆ ಮಹೇಂದ್ರ, ಕೂವೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೇಮಾ, ಸದಸ್ಯೆ ಶಶಿತಾ, ಕಳಸ ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಮುಖ್ಯ ಶಿಕ್ಷಕಿ ಶೋಭ, ಪೂಜಾ ಸಮಿತಿ ಅಧ್ಯಕ್ಷರಾದ ರವೀಂದ್ರ, ಪದಾಧಿಕಾರಿಗಳಾದ ಸಂದೇಶ್, ಕವನ, ಮಮತ, ನಿಮಿತ, ಸಂಗೀತಾ, ಸಾಗರ್, ಚಂದ್ರಶೇಖರ್ ಮುಂತಾದವರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ