ಕೊಟ್ಟಿಗೆಹಾರ:ನಿಡುವಾಳೆ ಸಮೀಪದ ಕಲ್ಮನೆಯ ಸಮಜ ಸೇವಕರಾದ ಎಚ್.ಮಂಜುನಾಥ್ ಅವರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಮಾಜ ಸೇವಕರಾದ ಎಚ್.ಮಂಜುನಾಥ್ ಅವರಿಗೆ ೨೦೨೧ ರ ಡಿಸೆಂಬರ್ ೨೪ ರಂದು ಎದೆನೋವು ಕಾಣಿಸಿಕೊಂಡಿದ್ದು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದು ಸುರತ್ಕಲ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿವಿಧ ಔಷಧಿಗಳನ್ನು ನೀಡಿದ್ದು ರಕ್ಷ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ಮಾಡಿದ್ದಾರೆ. ಹೃದಯದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಯ ಭಾಗವಾಗಿ ವಿವಿಧ ರೀತಿಯ ಪರೀಕ್ಷೆ ಹಾಗೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದ್ದು ಇದಕ್ಕೆ ಲಕ್ಷಾಂತರ ರೂ ಹಣದ ಅಗತ್ಯವಿದೆ.
ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ೮ ನೇ ತರಗತಿ ಹಾಗೂ ಮಗಳು ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಮಂಜುನಾಥ್ ಅವರ ಪತ್ನಿ ಕಲ್ಮನೆಯ ಅಂಗನವಾಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಡು ಕಷ್ಟದಲ್ಲಿರುವ ಮಂಜುನಾಥ್ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದ್ದು ಮಂಜುನಾಥ್ ಅವರ ಚಿಕಿತ್ಸೆಗೆ ನೆರವು ನೀಡುವವರು ಮಂಜುನಾಥ್ ಅವರ ಕೆನರಾ ಬ್ಯಾಂಕಿನ ಮೂಡಿಗೆರೆ ಶಾಖೆಯ ಖಾತೆ ಸಂಖ್ಯೆ:೧೧೬೨೧೦೧೦೦೫೭೫೨. ಐಎಪ್‌ಎಸ್‌ಸಿ ಸಂಖ್ಯೆ ಸಿಎನ್‌ಆರ್‌ಬಿ೦೦೦೧೧೪೨ ಹಣ ಸಂದಾಯ ಮಾಡಬಹುದು. ಮಂಜುನಾಥ್ ಅವರ ಮೊಬೈಲ್ ಸಂಖ್ಯೆ:೯೬೦೬೬೯೮೯೫೮.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ