ಬಣಕಲ್:ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ ಎಂದು ನಿವೃತ್ತ ಯೋಧರಾದ ದಿನೇಶ್ ಹೇಳಿದರು.
ಬಣಕಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘ ಹಾಗೂ ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಮತ್ತು ಸಾರ್ವಜನಿಕರ ವತಿಯಿಂದ ಬಣಕಲ್‌ನಲ್ಲಿ ನಡೆದ ಹುತಾತ್ಮ ಯೋಧ ನಾಯಕ್ ಗಣೇಶ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸೋಣ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ. ದೇಶದ ಗಡಿಯಲ್ಲಿ ಹಗಲಿರುಳೆನ್ನದೇ, ಬಿಸಿಲು ಮಳೆ ಎನ್ನದೇ ಗಡಿ ಕಾಯುವ ಸೈನಿಕರ ಕಾರಣದಿಂದ ಸಮಾಜ ಆತಂಕವಿಲ್ಲದೇ ಬದುಕುವಂತಾಗಿದೆ. ಕುಟುಂಬ, ಸಂಸಾರವನ್ನು ಬಿಟ್ಟು ಯುದ್ದದಲ್ಲಿ ಹೋರಾಡಿ ಮಡಿವ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಅಂತ್ಯಸAಸ್ಕಾರದ ದಿನ ಮೃತದೇಹ ಸಾಗಿದ ಮಾರ್ಗದ ಉದ್ದಕ್ಕೂ ಸಾವಿರಾರು ಜನ ರಸ್ತೆ ಇಬ್ಬದಿಯಲ್ಲಿ ನಿಂತು ಮೃತ ಯೋಧನ ಅಂತಿಮ ದರ್ಶನ ಪಡೆದರು. ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನ ನೆರೆದಿದ್ದರು. ಇದು ಸಮಾಜದಲ್ಲಿ ಸೈನಿಕರಿಗೆ ಅಪಾರವಾದ ಗೌರವವಿರುವುದರ ಸಂಕೇತವಾಗಿದೆ ಎಂದರು.
ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ದೇಶ ಸೇವೆ ಮಾಡಲು ಇರುವ ಅವಕಾಶವಾಗಿದೆ. ದೇಶ ಸೇಔಎ ಮಾಡುವ ಪವಿತ್ರ ಕೆಲಸ ಕೆಲವರಿಗೆ ಮಾತ್ರ ಸಿಗುತ್ತದೆ. ನಮ್ಮ ದೇಶದಲ್ಲಿ ಯೋಧ ಮತ್ತು ರೈತರನ್ನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣಲಾಗುತ್ತದೆ ಎಂದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಲಾಯಿತು. ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಸಂಘಟನಾ ಕಾರ್ಯದರ್ಶಿ ಶರತ್, ನಿದೇರ್ಶಕರಾದ ಮಂಜುನಾಥ್, ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಫಯಾಜ್, ಖಜಾಂಚಿ ಸಲಾಂ, ಸದಸ್ಯರಾದ ಬಾಬು, ಪ್ರವೀಣ್, ರವಿ, ಸುಮನ್, ರವೀಂದ್ರ, ಮಧು ಗ್ರಾಮಸ್ಥರಾದ ಯತೀಶ್ ಕೂಡಹಳ್ಳಿ, ಅಣ್ಣಪ್ಪಣ್ಣ, ಮಂಜಯ್ಯ, ಚಂದ್ರಯ್ಯ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ