ಸೋಮವಾರ, ಮಾರ್ಚ್ 4, 2024

ಮಾರ್ಚ್ 5 ಕ್ಕೆ ಬಣಕಲ್ ನಲ್ಲಿ ಆರೂಢ ಪ್ರಶ್ನೆ

 ಬಣಕಲ್:ಶ್ರೀ ರಕ್ತೇಶ್ವರಿ ಭಕ್ತವೃಂದ ಸೇವಾ ಟ್ರಸ್ಟ್ ನ ವತಿಯಿಂದ ಬಣಕಲ್ ನಲ್ಲಿ ಇಂದು ಆರೂಢ ಪ್ರಶ್ನೆ ನಡೆಯಲಿದೆ.
 ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಕ್ತೇಶ್ವರಿ ಭಕ್ತವೃಂದ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ, ಬಣಕಲ್ ಪ್ರದೇಶದ ಆಸುಪಾಸಿನಲ್ಲಿ  ಇರುವ ಶ್ರೀದುರ್ಗಾಪರಮೇಶ್ವರಿ, ಶ್ರೀ ಮಹಮ್ಮಾಯಿ, ಶ್ರೀ ದೇವಿಗುಡಿ ಮಾರಿಗುಡಿ ಇತ್ಯಾದಿ ಹಲವು ನಾಮಾಂಕಿತಗಳಿಂದ ಆರಾಧಿಸಲ್ಪಡುವ ಕ್ಷೇತ್ರಗಳಲ್ಲಿ ದೇವರ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಧನ್ಯತೆಯನ್ನು ಪಡೆದವರು, ಈ ಹಿಂದೆ ಶ್ರೀದೇವಿ ಸಾನಿಧ್ಯದಲ್ಲಿ ಆರೂಢ ಪ್ರಶ್ನೆಯನ್ನು ನಿರೂಪಿಸಿದ ಪ್ರಕಾರ ಕ್ಷೇತ್ರದ ನಾಗ ಸಾನಿಧ್ಯದೊಂದಿಗೆ ಪೂರ್ಣಾನುಗ್ರಹ ಪಡೆಯಲು ಶ್ತೀದೇವಿ ರಕ್ತೇಶ್ವರಿಯ ಸಾನಿಧ್ಯದ ಅಗತ್ಯತೆಯನ್ನು ದೈವಜ್ಞರು ಮನದಟ್ಟು ಮಾಡಿದ್ದರು. ಕಾರಣಾಂತರಗಳಿಂದ  ಸಾನಿಧ್ಯದ ಸ್ಥಾಪನೆಯೊಂದಿಗೆ  ಅನುಗ್ರಹಕ್ಕೆ ಪಾತ್ರರಾಗಲು ತಡವಾದುದ್ದರಿಂದ ಆ ಸಂಕಲ್ಪಿತ ಕಾರ್ಯದ ಜೀರ್ಣೋದ್ದಾರ ಪುನರ್ ಸ್ಥಾಪನೆಗಾಗಿ ಇರುವ ತೊಡಕುಗಳ ಬಗ್ಗೆ ತಿಳಿದುಕೊಳ್ಳುವ ಸದುದ್ದೇಶದಿಂದ ಆರೂಢ ಪ್ರಶ್ನೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬಣಕಲ್‌ನ ಶ್ರೀದೇವಿ ದುರ್ಗಾಪರಮೇಶ್ವರಿ ಮಹಾಮ್ಮಾಯಿ ಸಾನಿಧ್ಯದ ಮುಂಭಾಗದಲ್ಲಿ ಸ್ವಚ್ಚಗೊಳಿಸಿರುವ ಜಾಗದಲ್ಲಿ ತರಂಗ ತಜ್ಞರಾದ ವೆಂಕ್ರಮಣ ಉಪಾಧ್ಯಾಯರು ಮತ್ತು ರಾಜಶೃಖರ ರಾವ್ ಪೊಳಲಿ ದೈವಜ್ಞರಿಂದ ಆರೂಢ ಪ್ರಶ್ನೆ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಶುಕ್ರವಾರ, ಫೆಬ್ರವರಿ 9, 2024

ಫೆ ೨೮ ಕ್ಕೆ ಸಾವರ್ಕರ್ ಯುವ ಪ್ರತಿಷ್ಠಾನದ ಉದ್ಘಾಟನೆ ಶಿವದೂತೆ ಗುಳಿಗೆ ತುಳುನಾಟಕ ಪ್ರದರ್ಶನ



ಬಣಕಲ್:ಸಾವರ್ಕರ್ ಯುವ ಪ್ರತಿಷ್ಠಾನದ  ಉದ್ಘಾಟನಾ ಕಾರ್ಯಕ್ರಮ ಮತ್ತು ಶಿವದೂತೆ ಗುಳಿಗೆ ತುಳುನಾಟಕ ಪ್ರದರ್ಶನ ಫೆಬ್ರವರಿ ೨೮ ರಂದು ನಡೆಯಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಾರ್ಯಕ್ರಮದ ವ್ಯವಸ್ಥಾಪಕರಾದ ವಿನಯ್ ಶೆಟ್ಟಿ, ಸಾವರ್ಕರ್ ಯುವ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಫೆಬ್ರವರಿ ೨೮ ರಂದು ಬಣಕಲ್ ಸುಭಾಷನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂಜೆ ೬ ಗಂಟೆಗೆ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.

 ವಿಭಿನ್ನ ಶೈಲಿಯ ಈ ತುಳು ನಾಟಕವನ್ನು ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸಿದ್ದು ಕಲಾಸಂಗಮ್ ತಂಡದ ಕಲಾವಿದರು ಅಭಿನಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.